ಬೆಂಗಳೂರು- ನೋಡಿದವರು ಬೆಚ್ಚಿ ಬೀಳುವಷ್ಟು ಬಂಗಾರ ಇಟ್ಟುಕೊಂಡಿರುವ ಕೆ ಎ ಎಸ್ ಅಧಿಕಾರಿ ಸುಧಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೊಟೀಸ್ ನೀಡಿದೆ.
ಶನಿವಾರವಷ್ಟೇ ಸುಧಾ ಮನೆ ಹಾಗೂ ಅವರ ಆಪ್ತರ ಒಟ್ಟು 6 ಕಡೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಭಾರೀ ಮೊತ್ತದ ಚಿನ್ನಾಭರಣ ಸೇರಿದಂತೆ ಒಟ್ಟು 250 ಕೋಟಿ ಮೌಲ್ಯದ ಆಸ್ತಿಪತ್ರಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಮೂರುವರೆ ಕೆಜಿ ಚಿನ್ನ, ಏಳು ಕೆಜಿ ಬೆಳ್ಳಿ, 40 ಪಾಸ್ ಬುಕ್, ಹಾಗೂ 4ಕೋಟಿ ಠೇವಣಿ ಪತ್ತೆಯಾಗಿದೆ.
ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಸುಧಾ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆದಿದೆ.
ಇದುವರೆಗೆ ದೊರೆತ ದಾಖಲೆಗಳ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಕೆ ಎ ಎಸ್ ಅಧಿಕಾರಿ ಸುಧಾಗೆ ನೋಟಿಸ್ ನೀಡಲಾಗಿದೆ.
PublicNext
09/11/2020 08:35 am