ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯದ ಬಿಲ್ ಕೇಳಿದ್ದಕ್ಕೆ ಮಾರಾಮಾರಿ

ಬೆಂಗಳೂರು: ಮದ್ಯದ ಬಿಲ್ ಕೇಳಿದ್ದಕ್ಕೆ ಬಾರ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನೆಲಮಂಗಲದ ತ್ಯಾಮಗೊಂಡ್ಲುವಿನ ರೇಣುಕಾ ಬಾರ್​​​ನಲ್ಲಿ ನಡೆದಿದೆ.

ಘಟನೆಯಲ್ಲಿ ಬಾರ್ ಕ್ಯಾಷಿಯರ್ ದಿನೇಶ್ ಹಾಗೂ ಸಪ್ಲೈಯರ್ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶನಿವಾರ ಸಂಜೆ ರೇಣುಕಾ ಬಾರ್​ನಲ್ಲಿ ಘಟನೆ ನಡೆದಿದೆ.

ಬಾರಿಗೆ ಬಂದಿದ್ದ ಮುತ್ತುರಾಜ್ & ಗ್ಯಾಂಗ್ ಮದ್ಯ ಸೇವಿಸಿ ಬಿಲ್ ನೀಡದೇ ಹೋಗುತ್ತಿದ್ದರು. ಈ ವೇಳೆ ಬಾರ್​ ಸಿಬ್ಬಂದಿ ಬಿಲ್​ ಕಟ್ಟಿ ತೆರಳುವಂತೆ ಸೂಚಿಸಿದ್ದರು. ನಮ್ಮನ್ನೇ ಹಣ ಕೇಳ್ತೀರಾ ಎಂದು ಆರೋಪಿಗಳು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

08/11/2020 03:15 pm

Cinque Terre

76.39 K

Cinque Terre

2

ಸಂಬಂಧಿತ ಸುದ್ದಿ