ಬೆಂಗಳೂರು- ಎಸಿಬಿ ಅಧಿಕಾರಿಗಳು ಭ್ರಷ್ಟರ ಬೇಟೆಯನ್ನು ಮುಂದುವರೆಸಿದ್ದಾರೆ. ಶನಿವರ ಬೆಳ್ಳಂಬೆಳಿಗ್ಗೆಯೇ ಕೆ ಎ ಎಸ್ ಅಧಿಕಾರಿಯೊಬ್ಬರ ಚಳಿ ಬಿಡಿಸಿದ್ದಾರೆ.
ಬಿಡಿಎ ಭೂಸ್ವಾಧೀನಾಕಾರಿ ಸುಧಾ ಅವರ ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಇರುವ ಆರಾಧನಾ ಎಂಬ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಲ್ಲಿದ್ದ ಚಿನ್ನಾಭರಣ ಕಂಡು ದಂಗಾಗಿದ್ದಾರೆ. ಆರಾಧನಾ ಎಂಬ ಆ ಮನೆ ಅತ್ಯಂತ ಐಷಾರಾಮಿ ವ್ಯವಸ್ಥೆಯಿಂದ ಕೂಡಿದೆ.
ಸುಧಾ ಅವರ ಪತಿ ಸ್ಟ್ರೋನಿ ಪಾಯಸ್ ಚಿತ್ರ ನಿರ್ಮಾಪಕರೂ ಹೌದು. ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದಾರೆ. ಸುಧಾ ಅವರ ಮನೆ ಸೇರಿದಂತೆ ಅವರ ಸಂಬಂಧಿಕರ ಮನೆ ಮೇಲೂ ಕೂಡ ದಾಳಿ ನಡೆದಿದೆ. ಎಲ್ಲ ದಾಖಲೆಗಳ ಪರಿಶೀಲನೆ ನಡೆದಿದೆ.
PublicNext
07/11/2020 03:16 pm