ನವದೆಹಲಿ: ಬಿಎಸ್‌ಎಫ್ ಸಿಬ್ಬಂದಿ ಜೊತೆಗೂಡಿ ಭಾರತ– ಬಾಂಗ್ಲಾದೇಶ ಗಡಿಯಲ್ಲಿ ಗೋವುಗಳ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಇನಾಮುಲ್ ಹಕ್ ಬಂಧಿತ ಆರೋಪಿ. ಈತನನ್ನು ಶುಕ್ರವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ಆರೋಪಿ ಇನಾಮುಲ್ ಹಕ್ ಹಾಗೂ ಇತರ ಆರೋಪಿಗಳಾದ ಅನಾರುಲ್ ಎಸ್.ಕೆ, ಮೊಹಮ್ಮದ್ ಗುಲಾಂ ಮುಸ್ತಫ್‌ಗೆ ನೆರವು ನೀಡಿದ ಆರೋಪದ ಮೇಲೆ 36ನೇ ಬಿಎಸ್‌ಎಫ್ ಬೆಟಾಲಿಯನ್‌ನ ಮಾಜಿ ಕಮಾಂಡೆಂಟ್ ಸತೀಶ್‌ಕುಮಾರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಗೋವುಗಳ ಕಳ್ಳ ಸಾಗಣೆ ಮಾಡುವವರು ಗಡಿಭಾಗದಲ್ಲಿ ಬಿಎಸ್‌ಎಫ್ ಹಾಗೂ ಸುಂಕ ವಸೂಲಿ ಸಿಬ್ಬಂದಿಗೆ ಲಂಚ ಕೊಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.
PublicNext
06/11/2020 04:10 pm