ಬಳ್ಳಾರಿ: ಮಹಿಳಾ ಕೂಲಿ ಕಾರ್ಮಿಕರು ತೆರಳುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ ಭಾರಿ ದುರಂತ ಬಳ್ಳಾರಿ ಬಳಿ ನಡೆದಿದೆ.
ಮೃತರದಲ್ಲಿ ದುರ್ಗಮ್ಮ (40), ನಿಂಗಮ್ಮ (38) ಮೃತ ದುರ್ದೈವಿಗಳು. ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ. ಚಾಲಕ ಸೇರಿ ಸುಮಾರು 8 ಜನ ಮಹಿಳಾ ಕೂಲಿ ಕಾರ್ಮಿಕರು ಆಟೋದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಒಬ್ಬ ಈಜಿ ದಡ ಸೇರಿದರೆ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇನ್ನು ಮೂವರ ಶವಗಳು ಸಿಕ್ಕಿದೆ. ಉಳಿದವರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ದಮ್ಮುರು ಯರೆಮ್ಮ ಹಾಗೂ ಹೇಮಾವತಿ ಎಂಬುವ್ರನ್ನು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಬಳ್ಳಾರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
PublicNext
14/09/2022 12:37 pm