ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನುಮಾಸ್ಪಾದ ಸ್ಥಿತಿ‌ಯಲ್ಲಿ ನಿವೃತ್ತ ಬಿಇಎಂಎಲ್ ಉದ್ಯೋಗಿ ಸಾವು

ಆರ್‌ಆರ್ ನಗರ: ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಿಇಎಂಎಲ್ ನಿವೃತ್ತ ಉದ್ಯೋಗಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರೋದು ತಡವಾಗಿ ಬೆಳಕಿಗೆ ಬಂದಿದೆ.

85 ವರ್ಷದ ಮಹಾದೇವಯ್ಯ ಸಾವನ್ನಪ್ಪಿದ್ದ ವೃದ್ಧನಾಗಿದ್ದು, ಆರ್.ಆರ್ ನಗರದ ವಾಸವಾಗಿದ್ದ ಮಹದೇವಯ್ಯ ಬಿಇಎಂಎಲ್ ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡಿ ಕಳೆದ 15 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಪತ್ನಿ ಜಯಮ್ಮ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಕೆಲಸ‌ ಮಾಡಿ ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಪಡೆದುಕೊಂಡು ಮೈಸೂರಿನ ಶಾರದಾನಗರದಲ್ಲಿ‌ ಅಪಾರ್ಟ್ ಮೆಂಟ್ ವೊಂದರಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ರು.

ಈ ದಂಪತಿಗೆ ಮಕ್ಕಳಿರಲಿಲ್ಲ ತಾನಾಯಿತು ತನ್ನ ಕೆಲಸವಾಯಿತು ಒಬ್ಬಂಟಿಗನಾಗಿ ಇರುತ್ತಿದ್ದ ಮಹದೇವಯ್ಯ ಅವರನ್ನು‌ ಅಕ್ಕಪಕ್ಕದ ಮನೆಯವರು ಸೆ.4ರಂದು ನೋಡಿದ್ದರು. ಸೆ.7ವರೆಗೂ ಮಹದೇವಯ್ಯ ಯಾರು ನೋಡಿರಲಿಲ್ಲ. ಅನುಮಾನಗೊಂಡು ನೆರೆಯ ನಿವಾಸಿ ಭಾರತಿ ಎಂಬುವರು ಮನೆಗೆ ಬಂದು ನೋಡಿದಾಗ ಮೃತರಾಗಿರುವ ಸಂಗತಿ ಬೆಳಕಿಗೆ ಬಂದಿದ್ದು ಪತ್ನಿ ಜಯಮ್ಮಗೆ ವಿಷಯ ಮುಟ್ಟಿಸಿದ್ದರು.

ಸ್ಥಳಕ್ಕೆ ಬಂದು‌ ಪರಿಶೀಲಿಸಿದ ಜಯಮ್ಮ, ತನ್ನ ಗಂಡನನ್ನ ಅಪರಿಚಿತರು ಕೊಲೆ ಮಾಡಿದ್ದಾರೆ. ಅಲ್ಲದೆ ಮನೆಯ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿ‌ ಪೊಲೀಸರು ಕೊಲೆ‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.‌

ಪ್ರಾಥಮಿಕ ತನಿಖೆ ವೇಳೆ ಮೃತರ ಯಾವುದೇ ಗಾಯವಾಗಿರುವ‌ ಕುರುಹು ಪತ್ತೆಯಾಗಿಲ್ಲ.. ಅಲ್ಲದೆ ಕಳ್ಳತನವಾಗಿರುವ ಪರಿಶೀಲನೆ ನಡೆಸುತ್ತಿದ್ದಾರೆ‌.‌‌ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಇನ್ನಷ್ಟೇ ಬರಬೇಕಿದೆ‌ ಪೊಲೀಸ್ ಮೂಲಗಳು ತಿಳಿಸಿವೆ.

Edited By : Abhishek Kamoji
PublicNext

PublicNext

10/09/2022 03:47 pm

Cinque Terre

43.06 K

Cinque Terre

0

ಸಂಬಂಧಿತ ಸುದ್ದಿ