ಕೊಪ್ಪಳ: ಬಳೆ ಅಂಗಡಿ ಮುಂದೆ ಮಲಗಿದ್ದವರ ಮೇಲೆ ವ್ಯಕ್ತಿಯೊಬ್ಬ ಟೆಂಪೋ ಹರಿಸಿದ್ದಾರೆ. ಈ ಘಟನೆಯಿಂದ ಒಬ್ಬ ಮೃತಪಟ್ಟಿದ್ದಾನೆ. ಮೂವರಿಗೆ ಗಾಯವಾಗಿದೆ.
ತಾಲೂಕಿನ ಧಾರ್ಮಿಕ ಕ್ಷೇತ್ರ ಹುಲಗಿಯ ನಂದಿ ಸರ್ಕಲ್ ರಸ್ತೆಯ ಮುದ್ದಮ್ಮ ದೇವಸ್ಥಾನದ ಹಿಂಭಾಗದಲ್ಲಿರೋ ಬಳೆ ಅಂಗಡಿ ಮುಂದೆ ಈ ಒಂದು ಘಟನೆ ನಡೆದಿದೆ.
ಮೃತನನ್ನ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತಿಪ್ಪಣ್ಣ ದುರಗಪ್ಪ (75) ಎಂದು ಗುರುತಿಸಲಾಗಿದೆ. ಹನುಮವ್ವಾ ಉಪ್ಪಾರ್ (57) ಮಲ್ಲಮ್ಮ ಬಿಳೆಕಲಪ್ಪ (32),ತುಕಾರಾಮ್ ಮಾಕಪ್ಪ (65) ಅನ್ನೋರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಳ್ಳಾರಿ ತಾಲೂಕಿನ ಯರಂಗಳಿಯ ಟೆಂಪೋ ಚಾಲಕ ಶ್ರೀನಿವಾಸ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ. ಅದಕ್ಕೇನೆ ಈ ಘಟನೆ ನಡೆದಿದೆ ಎಂದು ರಸ್ತೆ ಬದಿ ಮಲಗಿದ್ದ ರುದ್ರಪಾಲ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
PublicNext
26/07/2022 09:34 am