ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೂರು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳೀಯ ರೈತರು ಅಸುನೀಗಿದ್ದಾರೆ.
ಫಕೀರಪ್ಪ ಸಿದ್ದಪ್ಪ ಚಂದರಗಿ(54) ಹಾಗೂ ಮಹಾದೇವ ದುರ್ಗಪ್ಪ ಮೇತ್ರಿ (40) ಮೃತರು ಎಂದು ತಿಳಿದುಬಂದಿದೆ. ಕಬ್ಬಿನ ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ಹರಿದು ಬಿದ್ದು ಬಲಿಯಾಗಿದ್ದಾರೆ. ಜಿಲ್ಲಾ ಎಸ್‌ಪಿ ಡಾ.ಸಂಜೀವ ಪಾಟೀಲ ಮಾರ್ಗದರ್ಶನದಲ್ಲಿ ಸವದತ್ತಿ ಪೊಲೀಸರು ಪರಿಶೀಲಿಸಿದ್ದು, ಸ್ಥಳೀಯ ಗ್ರಾಮಸ್ಥರು ಹೆಸ್ಕಾಂ ವಿರುದ್ಧ ಕಿಡಿಕಾರಿದ್ದಾರೆ.
ವರದಿ: ಸಂತೋಷ ಬಡಕಂಬಿ
PublicNext
17/07/2022 10:06 pm