ರಾಂಚಿ: ಜಾರ್ಖಂಡ್ ಜೆಮ್‌ಶೆಡ್‌ಪುರದಲ್ಲಿರುವ ಟಾಟಾ ಸ್ಟೀಲ್ ಕೋಕ್ ಪ್ಲಾಂಟ್‌ನಲ್ಲಿ ಸ್ಫೋಟ ಸಂಭವಿಸಿದೆ. ಮಾಹಿತಿ ಪ್ರಕಾರ, ಸ್ಫೋಟವು ಎಷ್ಟು ಭೀಕರವಾಗಿತ್ತೆಂದರೆ ಈ ಶಬ್ದವು ಬಹಳ ದೂರದವರೆಗೆ ಕೇಳಿಸಿದೆಯಂತೆ. ಘಟನೆಯ ನಂತರ ಜಿಲ್ಲೆಯಲ್ಲಿ ಜನರು ಭಯಭೀತಗೊಂಡಿದ್ದರು.
ಸ್ಫೋಟದ ನಂತರ ಅನಿಲ ಸೋರಿಕೆ ಮತ್ತು ಬೆಂಕಿಯ ಘಟನೆಯಿಂದಾಗಿ ಭೀತಿ ಉಂಟಾಗಿದೆ. ಐಎಂಎಂಎಂ ಕೋಕ್ ಸ್ಥಾವರದ ಬ್ಯಾಟರಿ ಸಂಖ್ಯೆ 6 ಮತ್ತು 7ರಲ್ಲಿ ಅಪಘಾತ ಸಂಭವಿಸಿದೆ. ಈ ಘಟನೆಯಿಂದಾಗಿ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬ್ಯಾಟರಿ ಸಂಖ್ಯೆ ಐದು, ಆರು, ಏಳು ಇರುವ ಗ್ಯಾಸ್ ಲೈನ್ನಲ್ಲಿ ಹಾಟ್ ಜಬ್ ಅಂದರೆ ಗ್ಯಾಸ್ ಕಟಿಂಗ್ ಮತ್ತು ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ಆಗ ಗ್ಯಾಸ್ ಲೈನ್ನಿಂದ ಗ್ಯಾಸ್ ಸೋರಿಕೆಯಾಗತೊಡಗಿತು. ಅದರ ನಂತರ ಸ್ಫೋಟ ಸಂಭವಿಸಿದೆ.
PublicNext
07/05/2022 03:58 pm