ತುಮಕೂರು: ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಭೀಕರ ಘಟನೆ ಕುಣಿಗಲ್ ತಾಲೂಕಿನ ಬೀಸೆಗೌಡನದೊಡ್ಡಿಯಲ್ಲಿ ನಡೆದಿದೆ.
ಚನ್ನಪಟ್ಟಣ ಮೂಲದ ಶಾಮಿಯ ಮೊಹಲ್ಲಾದ ಸೈಯದ್ ಮಹಮ್ಮದ್ ನಜ್ಮಿ (45), ಪತ್ನಿ ನಾಜೀಯಾ (35) ಹಾಗೂ ಕುಂದನ್ ಅಸೀ (1) ಮೃತ ದುರ್ದೈವಿಗಳು. ಇನ್ನೊಂದು ಮಗು 3 ವರ್ಷದ ಸೈಯದ್ ಕುಂದನ್ ನಬೀ ತೀವ್ರವಾಗಿ ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಸಂಬಂಧ ಹುಲಿಯೂರುದುರ್ಗ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
03/05/2022 10:41 pm