ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೀಬೆ ಹಣ್ಣು ಕೀಳಲು ಹೋದ ಬಾಲಕಿಯರು ನೀರು ಪಾಲು

ಚಾಮರಾಜನಗರ: ಸೀಬೆ ಹಣ್ಣು ಕೀಳುವಾಗ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ಇಬ್ಬರು ಬಾಲಕಿಯರು ಮೃರಪಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬೇಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪುಣ್ಯಾ (14) ಹಾಗೂ ಪೂಜಾ(10) ಮೃತ ಬಾಲಕಿಯರು. ಇಂದು ಬೆಳಿಗ್ಗೆ ಸೀಬೆ ಹಣ್ಣು ಕೀಳಲೆ‌ಂದು ಈ ಬಾಲಕಿಯರು ತೋಟಕ್ಕೆ ಹೋಗಿದ್ದಾರೆ. ಇದೇ ವೇಳೆ ದುರ್ಘಟನೆ ಸಂಭವಿಸಿದೆ‌. ಇವರು ಕಬ್ಬೇಪುರ ಗ್ರಾಮದ ರೇಚಣ್ಣ ಎಂಬುವರ ಮಕ್ಕಳಾಗಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nagaraj Tulugeri
PublicNext

PublicNext

03/05/2022 05:57 pm

Cinque Terre

103.38 K

Cinque Terre

0

ಸಂಬಂಧಿತ ಸುದ್ದಿ