ಜೈಪುರ: ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ರಾಜಸ್ಥಾನದ ಖೇತ್ರಿ ಪಟ್ಟಣದ ಬರಾವು ಗ್ರಾಮದ ಒಂದೇ 10 ಮಂದಿಯನ್ನು ಒಟ್ಟಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ವೇಳೆ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.
ಅಪಘಾತದಲ್ಲಿ ಗಿರ್ಧಾರಿ ಲಾಲ್ ಅವರ ಮಗ ಸುಮೇರ್ ಅವರ ಇಡೀ ಕುಟುಂಬ ನಾಶವಾಯಿದೆ. ಕೃಷ್ಣನಗರದಲ್ಲಿ ಗಿರ್ಧಾರಿ ಲಾಲ್ ಯಾದವ್ ನಿಧನರಾದ 15 ದಿನಗಳ ನಂತರ, ಕುಟುಂಬವು ಅಸ್ಥಿ ವಿಸರ್ಜನೆ ಮತ್ತು ಸ್ನಾನಕ್ಕಾಗಿ ಲೋಹಗಲ್‌ಗೆ ಹೋಗಿತ್ತು ಎನ್ನಲಾಗಿದೆ. ಅಲ್ಲಿಂದ ಹಿಂತಿರುಗುತ್ತಿದ್ದಾಗ ಗುಡಗೌಡಜಿ ಬಳಿ ಕುಟುಂಬ ಸದಸ್ಯರಿದ್ದ ಪಿಕಪ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 10 ಮಂದಿ ಒಂದೇ ಕುಟುಂಬಕ್ಕೆ ಸೇರಿದವರು. ಹಲವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಲ್ಲಿ ಗಿರ್ಧಾರಿ ಲಾಲ್ ಅವರ ಮಗ ಸುಮೇರ್ ಅವರ ಇಡೀ ಕುಟುಂಬ ನಾಶವಾಯಿದೆ. ಸುಮೇರ್, ಅವರ ಪತ್ನಿ ರಾಜಬಾಲಾ, ಇಬ್ಬರು ಮಕ್ಕಳಾದ ಕರ್ಮವೀರ್ ಮತ್ತು ರಾಹುಲ್ ಅವರ ಸಾವನ್ನಪ್ಪಿದ್ದು, ಈಗ ಮಗಳು ದೀಪಿಕಾ ಮನೆಯಲ್ಲಿ ಉಳಿದಿದ್ದಾರೆ. ಅಂತಿಮ ವರ್ಷ ಓದುತ್ತಿರುವ ದೀಪಿಕಾ ಪರೀಕ್ಷೆಯ ಕಾರಣ ಲೋಹಗರ್ಲ್‌ಗೆ ಹೋಗಿರಲಿಲ್ಲ. ಅಪಘಾತದ ಸುದ್ದಿ ಕೇಳಿ ಆಕೆ ಪ್ರಜ್ಞಾಹೀನಳಾಗಿದ್ದಳು.
ಹತ್ತು ಸದಸ್ಯರ ಶವ ಒಂದೇ ಬಾರಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದಾಗ, ಕುಟುಂಬ ಸದಸ್ಯರನ್ನು ನಿಭಾಯಿಸುವುದು ಕಷ್ಟಕರವಾಯಿತು. ಜಿಲ್ಲಾಧಿಕಾರಿ ಲಕ್ಷ್ಮಣ್ ಸಿಂಗ್ ಕುಡಿ, ಎಸ್ಪಿ ಪ್ರದೀಪ್ ಮೋಹನ್ ಶರ್ಮಾ, ಮುಖ್ಯಮಂತ್ರಿಗಳ ಸಲಹೆಗಾರ ಡಾ.ಜಿತೇಂದ್ರ ಸಿಂಗ್, ಪ್ರಾಂಶುಪಾಲರಾದ ಮನೀಶಾ ಗುರ್ಜಾರ್, ಉಪವಿಭಾಗಾಧಿಕಾರಿ ಜೈಸಿಂಗ್, ಉಪವಿಭಾಗಾಧಿಕಾರಿ ರಾಜೇಶ್ ಕಸಾನ, ತಹಸೀಲ್ದಾರ್ ವಿವೇಕ್ ಕಟಾರಿಯಾ ಸೇರಿದಂತೆ ಹತ್ತಾರು ಸಾರ್ವಜನಿಕ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿದ್ ಕೂಡ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, 'ಜುಂಜುನುವಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಸುದ್ದಿ ತಿಳಿದು ನನಗೆ ಅತೀವ ದುಃಖವಾಗಿದೆಈ ಅಪಘಾತದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ' ಎಂದು ಸಂತಾಪ ಸೂಚಿಸಿದ್ದಾರೆ
ಘಟನೆಯನ್ನು ದುರಂತ ಎಂದು ಬಣ್ಣಿಸಿರುವ ಪ್ರಧಾನಿ ಕಾರ್ಯಾಲಯ ಕೂಡ ಆರ್ಥಿಕ ನೆರವು ನೀಡಲು ಮುಂದಾಗಿದೆ. 'ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ಐವತ್ತು ಸಾವಿರ ರೂಪಾಯಿಗಳನ್ನು ನೀಡಲಿದೆ' ಎಂದು ಪಿಎಂಒ ಟ್ವೀಟ್ ಮಾಡಿದೆ.
PublicNext
21/04/2022 08:15 am