ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಗುಡ್ಡದಲ್ಲಿ ಬಂಡೆ ಕುಸಿದು 10ಕ್ಕೂ ಅಧಿಕ ಕಾರ್ಮಿಕರು ಸಾವು.!- ಟಿಪ್ಪರ್​ಗಳು ಚೆಲ್ಲಾಪಿಲ್ಲಿ

ಚಾಮರಾಜನಗರ: ಏಕಾಏಕಿ ಬಂಡೆ ಕುಸಿದು ಘಟನೆ ಗುಮ್ಮಕಲ್ಲು ಗುಡ್ಡದಲ್ಲಿ ನಡೆದಿದ್ದು, ಈ ದುರಂತದಲ್ಲಿ ಬಂಡೆಯಡಿ ಸಿಲುಕಿದ್ದ 10ಕ್ಕೂ ಅಧಿಕ ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇಂದು ಏಕಾಏಕಿ ಕಲ್ಲು ಕ್ವಾರಿಯಲ್ಲಿ ಬಂಡೆಗಳು ಕುಸಿದಿವೆ. ಸ್ಥಳದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಟಿಪ್ಪರ್​ ಮೇಲೆ ಕುಸಿದ ಈ ಬಂಡೆಗಲ್ಲುಗಳು ಬಿದ್ದಿವೆ. ಹೀಗಾಗಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಬಂಡೆಗಲ್ಲು ಅಡಿಯಲ್ಲೇ ಸಿಲುಕಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರಾಜಸ್ಥಾನ, ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ.

ಮಹೇಂದ್ರಪ್ಪ ಮತ್ತು ಕೇರಳ ಮೂಲದ ಹಕ್ಕೀಮ್​​ ಎಂಬುವರು 1 ಎಕರೆ ಸರ್ಕಾರಿ ಭೂಮಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 5 ವರ್ಷಕ್ಕೆ ಗುತ್ತಿಗೆ ಪಡೆದು ಗಣಿಗಾರಿಕೆ ನಡೆಸುತ್ತಿದ್ದರು. ಇದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೂ ಗಣಿಗಾರಿಕೆ ನಡೆಸಲಾಗಿತ್ತು ಎನ್ನಲಾಗಿದೆ.

Edited By : Vijay Kumar
PublicNext

PublicNext

04/03/2022 05:03 pm

Cinque Terre

58.82 K

Cinque Terre

0

ಸಂಬಂಧಿತ ಸುದ್ದಿ