ಕೊಪ್ಪಳ: ಫೈನಾನ್ಸ್ ಕಿರುಕುಳ ತಾಳಲಾಗದೇ ಬೇಸತ್ತ ಕ್ರೂಸರ್ ಮಾಲೀಕ ಕ್ರೂಸರ್ಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆ ಕೊಪ್ಪಳ ಬಸ್ ನಿಲ್ದಾಣದ ಮುಂದೆ ನಡೆದಿದೆ.
ಕ್ರೂಸರ್ ಮಾಲೀಕನ ಹೆಸರು ಸುಭಾಶ್. ಸಾಲ ಮಾಡಿ ಒಂದು ಕ್ರೂಸರ್ ಖರೀದಿಸಿದ್ದರು. ಆದರೆ ಫೈನಾನ್ಸ್ ಹಣ ಕಟ್ಟಲಾಗದೇ ಕಷ್ಟಪಟ್ಟಿದ್ದಾರೆ. ಕೊನೆಗೆ ತಮ್ಮ ಕ್ರೂಸರ್ ಗೆ ತಾವೇ ನಡು ರಸ್ತೆಯಲ್ಲಿ ಬೆಂಕಿ ಹಚ್ಚಿ ಬಿಟ್ಟಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ.
PublicNext
30/01/2022 05:04 pm