ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯಲ್ಲಿ ಅಗ್ನಿ ಅವಘಡ: ಆಯುರ್ವೇದ ವೈದ್ಯ ಸಜೀವ ದಹನ

ವಿಜಯಪುರ: ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ವೈದ್ಯರೊಬ್ಬರು ಸಜೀವ ದಹನವಾದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಆಯುರ್ವೇದ ವೈದ್ಯರಾಗಿದ್ದ ಡಾ. ರಮೇಶಗೌಡ ಬಿರಾದಾರ ಎಂಬುವವರೇ ಘಟನೆಯಲ್ಲಿ ಮೃತಪಟ್ಟವರು.

ವಿಜಯಪುರ ನಗರದ ಬಂಜಾರಾ ಕ್ರಾಸ್ ಬಳಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಬೆಡ್ ರೂಂನಲ್ಲಿ ಏಕಾಏಕಿ ಬೆಂಕಿ ಕಾಣಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡವೋ ಅಥವಾ ವೈದ್ಯ ರಮೇಶ್‌ಗೌಡ ಅವರೇ ಈ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾರಾ? ಎಂಬ ಅನುಮಾನಗಳು ಮೂಡಿದೆ.

ಬಂಜಾರಾ ಕ್ರಾಸ್‌ನಲ್ಲಿ ಧನ್ವಂತರಿ ಕ್ಲಿನಿಕ್ ನಡೆಸುತ್ತಿದ್ದ ರಮೇಶ್‌ಗೌಡ ಬಿಎಎಂಎಸ್, ಡಿಇಎಂ ಕೋರ್ಸ್ ಮುಗಿಸಿದ್ದರು. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Shivu K
PublicNext

PublicNext

28/12/2021 11:33 am

Cinque Terre

79.51 K

Cinque Terre

1