ಗದಗ: ಪೊಲೀಸ್ ಪೇದೆಯ ಹಣದ ಆಸೆಗೆ ಬೈಕ್ ಸವಾರ ಬಲಿಯಾದ ಘಟನೆ ಜಿಲ್ಲೆಯ ಮುಳಗುಂದ ಪಟ್ಟಣದ ಸಮೀಪದ ದಾವಲ್ ಮಲಿಕ್ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.
ಸೀತಾಲಹರಿ ಗ್ರಾಮದ ನೀಲಪ್ಪ ಗೌಡ ದೊಡ್ಡಗೌಡರ್ ಸಾವನ್ನಪ್ಪಿರುವ ವ್ಯಕ್ತಿ . ಈತ ಸೀತಾಲಹರಿಯಿಂದ ಮುಳಗುಂದಕ್ಕೆ ಬೈಕ್‌ನಲ್ಲಿ ಹೊರಟಿದ್ದ. ದಾವಲ್ ಮಲ್ಲಿಕ್ ಕ್ರಾಸ್ ಬಳಿ ಮರಳು ತುಂಬಿದ್ದ ಲಾರಿ ನಿಲ್ಲಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪೊಲೀಸ್ ಪೇದೆ ಸೋಮಶೇಖರ್ ರಾಮಗಿರಿ ಈ ವೇಳೆ ಹಿಂಬದಿಯಿಂದ ಬಂದಿದ್ದ ನೀಲಪ್ಪ ಏಕಾಏಕಿ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನೂ ಬೈಕ್ ಸವಾರ ಸಾವಿನ ಬಳಿಕ ಪೇದೆ ಲಾರಿ ಬಿಟ್ಟು ಕಳುಹಿಸಿದ್ದಾನೆ. ಘಟನೆ ಬಳಿಕ ಗ್ರಾಮಸ್ಥರು ಲಕ್ಷ್ಮೇಶ್ವರ ಗದಗ ರಸ್ತೆ ತಡೆದು ಪ್ರತಿಭಟನೆ ನಡೆಸಿ ಪೇದೆ ಸೋಮಶೇಖರ್ ವಜಾಕ್ಕೆ ಪಟ್ಟು ಹಿಡಿದಿದ್ದಾರೆ ಹಾಗೂ ಪರಾರಿಯಾದ ಲಾರಿ ಚಾಲಕನನ್ನು ವಶಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಜಯಂತ ಗೌಳಿ, ಡಿವೈಎಎಸ್‌ಪಿ ಪವಾಡಶೆಟ್ಟರ ಪ್ರಕರಣದ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
PublicNext
16/12/2021 12:14 pm