ಮೈಸೂರು: ಮೈಮೇಲೆ ಬಿಸಿ ನೀರು ಬಿದ್ದ ಪರಿಣಾಮ ಎರಡು ವರ್ಷದ ಕಂದಮ್ಮ ಮೃತಪಟ್ಟಿದೆ. ದಾಸನಕೊಪ್ಪಲು ನಿವಾಸಿ ಪೋಟೋಗ್ರಾಫರ್ ರಾಮು ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರಿ ಎರಡು ವರ್ಷದ ಆದ್ಯ ಎಂಬ ಕಂದಮ್ಮ ಮೃತಪಟ್ಟ ದುರ್ದೈವಿ.
ಮೈಸೂರು ತಾಲೂಕು ದಾಸನಕೊಪ್ಪಲಿನಲ್ಲಿ ಈ ದುರ್ಘಟನೆ ನಡೆದಿದೆ. ಸ್ನಾನ ಮಾಡಿಸಲು ತಾಯಿ ಜಯಲಕ್ಷ್ಮಿ ಬಿಸಿನೀರು ಕಾಯಿಸಿದ್ದಾರೆ. ತಣ್ಣೀರು ತರಲು ಹೋದಾಗ ಬಿಸಿನೀರಿನ ಪಾತ್ರೆಯನ್ನು ಆದ್ಯ ತನ್ನ ಮೈಮೇಲೆ ಎಳೆದುಕೊಂಡಿದೆ. ಮಗುವಿನ ಚೀರಾಟ ಕೇಳಿ ಓಡಿ ಬಂದ ಮನೆಯವರು ತಕ್ಷಣ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
14/12/2021 10:53 am