ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಗ್ಗು ಗುಂಡಿಯಲ್ಲಿ ಈಜಲು ಹೋದ ಮೂವರು ಬಾಲಕರು ದುರ್ಮರಣ

ಕಲಬುರಗಿ: ನೀರು ತುಂಬಿದ್ದ ತಗ್ಗು ಗುಂಡಿಯಲ್ಲಿ‌ ಈಜಾಡೋಕೆ ಇಳಿದು ಮೂವರು ಬಾಲಕರ ಮೃತಪಟ್ಟ ಘಟನೆ ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಹಾಕಲು ತಗ್ಗು ತೋಡಲಾಗಿತ್ತು. ನಿನ್ನೆ ಮಳೆ ಬಂದ ಕಾರಣ ಪಿಲ್ಲರ್ ಹಾಕಲು ತೋಡಲಾಗಿದ್ದ ತಗ್ಗಿನಲ್ಲಿ ನೀರು ಸಂಗ್ರವಾಗಿತ್ತು. ಇದೇ ನೀರಿಗಿಳಿದು ಈಜುತ್ತಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ದರ್ಶನ್ (12), ಪ್ರಶಾಂತ (10), ವಿಘ್ನೇಶ್ (9) ಎಂಬುವವರೇ ಮೃತ ಬಾಲಕರು. ಮಕ್ಕಳ ಶವ ಕಂಡ ಪೋಷಕರು ಆಕ್ರಂದನ ಹೇಳತೀರದಾಗತಿದೆ. ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nagaraj Tulugeri
PublicNext

PublicNext

03/11/2021 03:46 pm

Cinque Terre

46.31 K

Cinque Terre

0