ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ದೇವಿ ದರ್ಶನಕ್ಕಾಗಿ ಹೋದ ಇಬ್ಬರು ಮಸಣ ಸೇರಿದರು

ಕೊಪ್ಪಳ: ಆಟೋ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ವಣಬಳ್ಳಾರಿ ಸಮೀಪ ನಡೆದಿದೆ.

ಆಟೋದಲ್ಲಿದ್ದ ಮಂಜು (25) ಬಾಳವ್ವ (65) ಮೃತ ದುರ್ದೈವಿಗಳು. ಘಟನೆಯಲ್ಲಿ ಆರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇವರೆಲ್ಲರೂ ಜಿಲ್ಲೆಯ ಮುನಿರಾಬಾದ್‌ನ ಹುಲಿಗೆಮ್ಮ ದೇವಿ ದರ್ಶನಕ್ಕೆ ಹೋಗಿದ್ದರು. ಆದರೆ ವಣಬಳ್ಳಾರಿ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯವೇ ಆಟೋ ಪಲ್ಟಿಗೆ ಕಾರಣ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಳುಗಳನ್ನು ಸಮೀಪದ ಆಸ್ಪತ್ರೆ ದಾಖಲಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Vijay Kumar
PublicNext

PublicNext

22/10/2021 07:31 am

Cinque Terre

47.25 K

Cinque Terre

0

ಸಂಬಂಧಿತ ಸುದ್ದಿ