ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಂಡಕ್ಕೆ ಉರುಳಿದ ಕಾರು: ಜಾತ್ರೆಯಿಂದ ಮರಳುತ್ತಿದ್ದ ಐವರು ಮಸಣ ಸೇರಿದ್ರು.!

ಪಾಟ್ನಾ: ಚಾಲಕನ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು ಐವರು ಸಾವನ್ನಪ್ಪಿದ ಭೀಕರ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

ಮೃತರು 20ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ. ಜಾತ್ರೆಯಿಂದ ಗ್ರಾಮಕ್ಕೆ ಮರಳುತ್ತಿದ್ದಾಗ ಅರಾರಿಯಾ ಜಿಲ್ಲಾ ಕೇಂದ್ರದಿಂದ 40 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ. ಲೌಖ್ರಾ ಗ್ರಾಮದ ಕಲಾನಂದ್ ಮಂಡಲ್, ಗೆರಾರಿ ಗ್ರಾಮದ ಸುನೀಲ್ ಕರ್ದಾರ್, ಮಾಜ್‌ಹ್ವಾ ಗ್ರಾಮದ ಸುನಿಲ್ ಮಂಡಲ್, ಚೌರಿ ಗ್ರಾಮದ ಧನಂಜಯ್ ಸಾಹ್ ಮತ್ತು ನವೀನ್ ಸಾಹ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಕಾರು ಹೊಂಡಕ್ಕೆ ಬೀಳುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾದರು. ಆದರೆ ಅಷ್ಟರೊಳಗೆ ಐವರು ಮೃತಪಟ್ಟಿದ್ದರು. ಈ ಅವಘಡದಲ್ಲಿ ಕಾರು ಚಾಲಕ ಸೋನು ಯಾದವ್ ಗಂಭೀರವಾಗಿ ಗಾಯಗೊಂಡಿದ್ದು, ಅರಾರಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Edited By : Vijay Kumar
PublicNext

PublicNext

22/09/2021 07:51 am

Cinque Terre

58.1 K

Cinque Terre

0

ಸಂಬಂಧಿತ ಸುದ್ದಿ