ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡವರ ಸಹವಾಸ ಮಾಡ್ಬೇಡ ಎಂದು ಮಗಳಿಗೆ ಹೇಳಿದ್ದೆ: ಮೃತ ಬಿಂದು ತಂದೆ

ಬೆಂಗಳೂರು: ನಗರದ ಕೋರಮಂಗಲದಲ್ಲಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಹೊಸರು ಶಾಸಕ ವೈ.ಪ್ರಕಾಶ್ ಅವರ ಪುತ್ರ ಮೃತಪಟ್ಟಿದ್ದು, ಪುತ್ರನ ಜೊತೆಗಿದ್ದ ಬಿಂದು ಎಂಬ ಯುವತಿ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೃತಪಟ್ಟ ಬಿಂದು ತಂದೆ, ಮಗಳು ಎಂಎಸ್ ಸಿ ಮುಗಿಸಿ ಚೆನೈ ನಲ್ಲಿ ಉದ್ಯೋಗದಲ್ಲಿದ್ದಳು. ಕೋವಿಡ್ ಕಾರಣ ವರ್ಕ್ ಫ್ರಂ ಹೋಮ್ ನೀಡಿದ್ದರು. ಬೆಂಗಳೂರಿನಲ್ಲಿ ಇದ್ದರೂ ನಮ್ಮ ಜತೆ ಇರಲಿಲ್ಲ,

ಕೆಲಸಕ್ಕೆ ಅಡ್ಡಿ ಆಗುತ್ತೆ ಅಂತ ಪಿಜಿಯಲ್ಲಿ ಇದ್ದಳು ಎಂದು ಹೇಳಿದರು. ನಿನ್ನೆಯಷ್ಟೇ ನಿನ್ನೆ ಕರೆ ಮಾಡಿದಾಗ ಮಗಳು ಚೆನ್ನೈನಲ್ಲಿ ಇರುವುದಾಗಿ ಹೇಳಿದ್ದಳು. ಬೆಳ್ಳಂಬೆಳಿಗ್ಗೆ ಸುದ್ದಿ ನೋಡಿದಾಗ ಅಪಘಾತವಾಗಿರುವುದು ಗೊತ್ತಾಗಿದೆ. ಶಾಸಕನ ಪುತ್ರನನ್ನು ಮದುವೆಯಾಗುತ್ತೇನೆ ಎಂದು ಹಠ ಮಾಡಿದ್ದಳು. ಅವರು ದೊಡ್ಡವರು ಹೀಗಾಗಿ ಬೇಡ ಎಂದು ಮಗಳಿಗೆ ಹೇಳಿದ್ದೆ. ಏನೇ ಆದರೂ ನಾನು ಅವರನ್ನೇ ಮದುವೆಯಾಗುತ್ತೇನೆ ಎಂದಿದ್ದಳು ಅಂತ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

31/08/2021 07:31 pm

Cinque Terre

119.41 K

Cinque Terre

6