ಕೊಪ್ಪಳ: ಎರಡು ಲಾರಿಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರೂ ಚಾಲಕರು ಸೇರಿ ನಾಲ್ವರು ಪವಾಡ ಸದೃಶ ರೀತಿ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಪ್ಪಳ ತಾಲೂಕಿನ ಹಲಗೇರಿಯ ಮಿಲೇನಿಯಂ ಶಾಲೆ ಬಳಿ ನಡೆದಿದೆ.
ಮಧ್ಯಪ್ರದೇಶ ಹಾಗೂ ಬೆಂಗಳೂರು ಮೂಲದ ಎರಡೂ ಲಾರಿಗಳು ಹೊಸಪೇಟೆ ಕಡೆ ಹೊರಟಿದ್ದವು. ಮಂಗಳವಾರ ಮಧ್ಯರಾತ್ರಿ ಸರಿ ಸುಮಾರು 1:30ಕ್ಕೆ ಹಲಗೇರಿಯ ಮಿಲೇನಿಯಂ ಶಾಲೆ ಬಳಿ ಓವರ್ಟೇಕ್ ಮಾಡುವ ಭರದಲ್ಲಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಎರಡು ಲಾರಿಗಳು ನುಜ್ಜುಗುಜ್ಜಾಗಿವೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಸತತ ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ಲಾರಿಯಲ್ಲಿ ಸಿಲುಕಿದ್ದ ನಾಲ್ವರನ್ನ ರಕ್ಷಣೆ ಮಾಡಿದ್ದಾರೆ. ಒಂದು ಲಾರಿಯಲ್ಲಿ ಮೂರು ಜನ, ಇನ್ನೊಂದು ಲಾರಿಯಲ್ಲಿ ಓರ್ವ ಚಾಲಕ ಇದ್ದರು ಎಂದು ತಿಳಿದುಬಂದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
11/08/2021 10:59 am