ಕೊಪ್ಪಳ: ಸಾರಿಗೆ ಬಸ್ ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಓರ್ವ ಬಾಲಕಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ದೇವಲಾಪುರ ಬಳಿ ನಡೆದಿದೆ.
ಭಾಗ್ಯನಗರ ಪಟ್ಟಣದ ಸ್ನೇಹಾ (15) ಮೃತ ಬಾಲಕಿ. ಗೌರಿ ಹಾಗೂ ತೇಜಸ್ವಿನಿ ಎಂಬ ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಮೂವರು ಬಾಲಕಿಯರು ಸ್ಕೂಟಿಯಲ್ಲಿ ಬರ್ತ್‌ಡೇ ಆಚರಣೆಗೆ ದೇವಲಾಪುರ ಮಾರ್ಗವಾಗಿ ಹಿರೇಹಳ್ಳ ಡ್ಯಾಂಗೆ ಹೊರಟಿದ್ದರು. ಆದರೆ ನಿಯಂತ್ರಣ ತಪ್ಪಿದ ಸ್ಕೂಟಿ ಸಾರಿಗೆ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/03/2021 10:37 am