ಹೈದರಾಬಾದ್: ಮಗಳ ಮದುವೆ ನಿಶ್ಚಿತಾರ್ಥಕ್ಕೆ ಹೊರಟಿದ್ದ ತಂದೆ-ತಾಯಿ ಹಾಗೂ ವಧು ನೀರುಪಾಲಾದ ದುರ್ಘಟನೆ ತೆಲಂಗಾಣದ ಜಗ್ತಿಯಲ್‌ನಲ್ಲಿ ಸೋಮವಾರ ನಡೆದಿದೆ.
ಕಾರು ಚಾಲನೆ ಮಾಡುತ್ತಿದ್ದ ಕತಿಕಾನೇನಿ ಅಮರೇಂದರ್ ರಾವ್ (58), ಅವರ ಪತ್ನಿ ಸಿರಿಶಾ (52) ಮತ್ತು ಪುತ್ರಿ, ವಧು ಕತಿಕಾನೇನಿ ಶ್ರೇಯಾ (27) ಮೃತ ದುರ್ದೈವಿಗಳು. ಈ ದುರ್ಘಟನೆಯಲ್ಲಿ ಜಯಂತ್ (19) ಪಾರಾಗಿದ್ದಾರೆ. ಏಕಾಏಕಿ ಅಮರೇಂದರ್ ಅವರ ನಿಯಂತ್ರಣ ತಪ್ಪಿದ ಕಾರು ಕಾಲುವೆಗೆ ಪಲ್ಟಿ ಹೊಡೆದಿದೆ. ಕಾಲುವೆಯಲ್ಲಿ ನೀರು ವೇಗವಾಗಿ ಹರಿಯುತ್ತಿದ್ದರಿಂದ ಜಯಂತ್ ಮಾತ್ರ ಕಾರಿನಿಂದ ಹೊರಬರಲು ಶಕ್ತರಾದರು. ತಕ್ಷಣವೇ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರು ಹಾಗೂ ಮೃತ ದೇಹವನ್ನು ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ.
PublicNext
15/02/2021 07:00 pm