ಕಲಬುರಗಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ರಾವೂರ ಬಳಿ ಇಂದು ನಡೆದಿದೆ.
ರಾವೂರ ಗ್ರಾಮದ ನಿವಾಸಿ ಭೀಮಾಶಂಕರ ಸುಭಾಷ್ ಪ್ಯಾಟಿ (28), ಅಕ್ಬರ್ ಪಟೇಲ್ (26) ಹಾಗೂ 20 ವರ್ಷದ ಯುವತಿ ಮೃತ ದುರ್ದೈವಿಗಳು. ಮೃತ ಯುವಕರಿಬ್ಬರು ಲಾರಿ ಚಾಲಕರಾಗಿದ್ದರು. ಘಟನಾ ಸ್ಥಳಕ್ಕೆ ವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಲಾರಿ ಡಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
11/01/2021 03:48 pm