ಪಾಟ್ನಾ: ರಸ್ತೆ ಮೇಲೆ ಬೈಕ್ ಚಲಾಯಿಸುವಾಗ ಸುಮ್ಮನೇ ನಮ್ಮ ಪಾಡಿಗೆ ನಾವು ಹೋಗುತ್ತಿರಬೇಕು. ಅನಗತ್ಯ ಸಾಹಸ ಮಾಡಲು ಹೋದ್ರೆ ಆಗಬಾರದ್ದು ಆಗಿಬಿಡುತ್ತೆ.
ಇದಕ್ಕೆ ಈ ವಿಡಿಯೋ ಬೆಸ್ಟ್ ಉದಾಹರಣೆ. ಇದು ಬಿಹಾರದ ಪಾಟ್ನಾ ನಗರದಲ್ಲಿ ನಡೆದಿದ್ದು ಬೈಕ್ ಮೇಲೆ ವೇಗವಾಗಿ ಬಂದಿದ್ದೂ ಅಲ್ಲದೇ ರಾಂಗ್ ಸೈಡ್ ಬಂದ ಆಸಾಮಿ ಎದುರಿಗೆ ಬರುತ್ತಿದ್ದ ಇನ್ನೊಂದು ಬೈಕ್‌ಗೆ ರಭಸದಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಎದುರಿನ ಬೈಕ್‌ನಲ್ಲಿದ್ದ ಮಹಿಳೆ ಹಾಗೂ ಸವಾರ ಬಿದ್ದು ಗಾಯಗೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಗಾಯಗೊಂಡವರನ್ನು ರಸ್ತೆ ಪಕ್ಕ ಕೂರಿಸಿ ಉಪಚರಿಸಿ ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ.
PublicNext
08/06/2022 07:37 pm