ಭೋಪಾಲ್: ತನ್ನ ತಂಗಿ ಬಾಯ್‌ಫ್ರೆಂಡ್ ಜೊತೆ ಬೈಕ್ ಮೇಲೆ ಹೋಗುತ್ತಿರುವುದನ್ನು ಕಂಡ ಅಣ್ಣ ಮಹಾ ಅವಾಂತರವನ್ನೇ ಸೃಷ್ಟಿಸಿದ್ದಾನೆ.
ಈ ಘಟನೆ ಮಧ್ಯಪ್ರದೇಶದ ಭೋಪಾಲ್ ನಗರದ ಅಯೋಧ್ಯಾ ನಗರದಲ್ಲಿ ನಡೆದಿದೆ. ತನ್ನ ಪ್ರಿಯಕರನ ಜೊತೆ ಬೈಕ್ ಮೇಲೆ ಹೋಗುತ್ತಿದ್ದ ತಂಗಿಯನ್ನು ನೋಡಿದ ಅಣ್ಣ, ಮಿನಿ ಟ್ರಕ್‌ನಲ್ಲಿ ಅವರನ್ನು ಹಿಂಬಾಲಿಸಿದ್ದಾನೆ. ನಂತರ ಸರಿಯಾದ ಜಾಗ ನೋಡಿ ಇಬ್ಬರೂ ಹೋಗುತ್ತಿದ್ದ ಬೈಕ್‌ಗೆ ರಭಸದಿಂದ ಗುದ್ದಿದ್ದಾನೆ. ಪರಿಣಾಮ ತಂಗಿ ಕೆಳಗೆ ಬಿದ್ದು ಗಾಯಗೊಂಡಿದ್ದಾಳೆ. ಆಕೆಯ ಪ್ರಿಯತಮ ಬಚಾವ್ ಆಗಿದ್ದಾನೆ. ಕೂಡಲೇ ಗಾಡಿಯಿಂದ ಇಳಿದ ಅಣ್ಣ, ತಂಗಿಯ ಪ್ರಿಯಕರನನ್ನು ಹಿಡಿಯಲು ಯತ್ನಿಸಿದ್ದಾನೆ.
ಸಿನಿಮೀಯ ಘಟನೆಯ ಈ ದೃಶ್ಯ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
PublicNext
22/04/2022 01:25 pm