ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಡಿದ ಮತ್ತಿನಲ್ಲಿ ಸರಣಿ ಅಪಘಾತ, ಸಾರ್ವಜನಿಕರಿಂದ ಗೂಸ

ಕಾರವಾರ: ಕುಡಿದು ಕಾರು ಚಾಲನೆ ಮಾಡಿ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಮಾಡಿದ ವ್ಯಕ್ತಿಯನ್ನ ಹಿಡಿದು ಹಿಗ್ಗಾಮುಗ್ಗ ಥಳಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ಪಟ್ಟಣದಲ್ಲಿ ನಡೆದಿದೆ. ರಾಜಸ್ಥಾನ ಮೂಲದ ರವೀಂದ್ರ ಶರ್ಮಾ ಕುಡಿದು ಕಾರು ಚಾಲನೆ ಮಾಡಿದ ವ್ಯಕ್ತಿಯಾಗಿದ್ದು ಸಾರ್ವಜನಿಕರಿಂದ ಸರಿಯಾಗಿ ಏಟು ತಿಂದಿದ್ದಾನೆ. ಕಾರವಾರದಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡ್ತಿದ್ದ ಈತ ಕಂಠಪೂರ್ತಿ ಕುಡಿದು ಕಾರು ಚಾಲನೆ ಮಾಡಿ ನಾಲ್ಕೈದು ವಾಹನಗಳಿಗೆ ಡಿಕ್ಕಿ ಮಾಡಿದ್ದಾನೆ. ಇದನ್ನ ಗಮನಿಸಿದ ಸ್ಥಳೀಯರು ಈತನನ್ನ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರವಾರ ಸಂಚಾರಿ ಠಾಣೆ ಪೊಲೀಸರು ಈತನನ್ನ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Edited By : Nagesh Gaonkar
PublicNext

PublicNext

23/10/2020 12:14 pm

Cinque Terre

141.76 K

Cinque Terre

6

ಸಂಬಂಧಿತ ಸುದ್ದಿ