ವಿವಾಹಿತ ಮಹಿಳೆ ಮಹಿಳೆಯೊಬ್ಬರು ಪರ ಪುರುಷನೊಂದಿಗೆ ಹೋಟೆಲ್ ರೂಮ್‌ನಲ್ಲಿರುವಾಗಲೇ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಪತ್ನಿ ಪರಪುರುಷನೊಂದಿಗೆ ಓಯೋ ರೂಮ್‌ನಲ್ಲಿ ಇರುವ ವಿಚಾರ ತಿಳಿದು ಅಲ್ಲಿಗೆ ಬಂದಂತಹ ಪತಿರಾಯ ವಿಡಿಯೋ ಮಾಡುತ್ತಾ ಇಲ್ಲಿಗೆ ನೀನ್ಯಾಕೆ ಬಂದಿದ್ದೀಯಾ? ಯಾರ ಜೊತೆ ಬಂದಿದ್ದೀಯಾ? ಕೋಪದಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಆಕೆಯ ಬಾಯ್‌ಫ್ರೆಂಡ್‌ಗಾಗಿ ಹುಡುಕಾಟ ನಡೆಸಿದ್ದಾನೆ. ಈ ಕುರಿತ ವಿಡಿಯೋವನ್ನು memes ಚೋರ್ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 'ಓಯೋದಲ್ಲಿ ಸಿಕ್ಕಿಬಿದ್ದಳು' ಎಂದು ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ನವೆಂಬರ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. “ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ತುಂಬಾ ಭಯಾನಕ ಸಂಗತಿಯಾಗಿದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಒಬ್ಬ ಬಳಕೆದಾರರು ʼಇದೇ ಕಾರಣಕ್ಕೆ ಈಗೀಗ ಹೆಚ್ಚಿನ ಜನರು ಮದುವೆಯಾಗಲು ಹೆದರುತ್ತಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್ ವಿಡಿಯೋ ಇದ್ದಂತಿದೆʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
PublicNext
04/11/2024 09:34 am