ಚಿಕ್ಕಮಗಳೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಬಡವಾಣೆಯಲ್ಲಿ ನಡೆದಿದೆ.
ಕಡೂರು ತಾಲೂಕಿನ ಬೀರೂರು ಸಮೀಪದ ವಗೇರಹಳ್ಳಿ ಮೂಲದ ರಂಜಿತಾ (25) ಮೃತ ಪತ್ನಿ. ಕೆಂಪನಹಳ್ಳಿಯ ಅರುಣ್ ಕುಮಾರ್ ಹಾಗೂ ರಂಜಿತಾ ಕಳೆದ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ 2 ವರ್ಷದ ಮಗು ಕೂಡ ಇದೆ. ಅರುಣ್ ಮಂಗಳವಾರ ಸಂಜೆ 4 ಗಂಟೆಗೆ ರಂಜಿತಾಗೆ ಪೋನ್ ಮಾಡಿ 'ಮೊದಲು ನಾನು ವಿಷ ಕುಡಿಯುತ್ತೇನೆ. ನೀನು ಸಾಯಿ' ಎಂದು ಪ್ರಚೋದನೆ ನೀಡಿದ್ದ. ಇದನ್ನ ನಂಬಿದ ರಂಜಿತಾ ಎರಡು ವರ್ಷ ಕಂದಮ್ಮನ ಎದುರಲ್ಲಿಯೇ ನೇಣು ಬಿಗಿದುಕೊಂಡಿದ್ದಾಳೆ.
PublicNext
04/11/2020 10:47 pm