ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ಟೆರರ್ ಅಟ್ಯಾಕ್ ಮಾದರಿಯಲ್ಲಿ ವಿಯೆನ್ನಾದಲ್ಲೂ ದಾಳಿ!

ವಿಯೆನ್ನಾ: ತೋಳಿನಲ್ಲಿ ಬ್ಯಾಗ್, ಕೈನಲ್ಲಿ ರಫೈಲ್ ಹಿಡಿದುಕೊಂಡು ಬಂದ ಉಗ್ರರು ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ವಿಯೆನ್ನಾದ ಪ್ರಮುಖ ಆರು ಪ್ರದೇಶಗಳಗಳಲ್ಲಿ ನಡೆದಿದೆ.

ಈ ಉಗ್ರರ ದಾಳಿಗೆ ಯುರೋಪ್ ಖಂಡ ಬೆಚ್ಚಿಬಿದ್ದಿದೆ.

ಒಬ್ಬ ಉಗ್ರನನ್ನು ಪೊಲೀಸರು ಕೊಂದಿದ್ದು, ಕೆಲವರನ್ನು ಸೆರೆ ಹಿಡಿದಿದ್ದಾರೆ. ಈ ದುಷ್ಕೃತ್ಯದ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನವೆಂಬರ್ 26,2008 ಮುಂಬಯಿನ ಮೇಲೆ ನಡೆದ ದಾಳಿಯಂತೆ ಭಾಸವಾಗಿದೆ.

ಅಂದು ಪಾಕಿಸ್ತಾನದಿಂದ ಮಾಯನಗರಿ ಮುಂಬಯಿಗೆ ಆಗಮಿಸಿದ ಅಪ್ಜಲ್ ಕಸಬ್ ಹಾಗೂ ಇನ್ನಿತರರು ಉಗ್ರರು ದಾಳಿ ನಡೆಸಿದ್ದರು.

ವಿಯೆನ್ನಾದಲ್ಲಿ ಕಿಕ್ಕಿರಿದು ಜನ ಸೇರಿರುವ ಸ್ಥಳದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಒಂದೇ ಕ್ಷಣದಲ್ಲಿ ನಗರಕ್ಕೆ ಎಂಟ್ರಿ ಕೊಟ್ಟ ಉಗ್ರರು ಆರು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ತೋಳಿನ ಮೇಲೆ ಬ್ಯಾಗ್, ಕೈನಲ್ಲಿ ಎಕೆ 47 ಹಿಡಿದುಕೊಂಡು ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಇವರ ಕುಕೃತ್ಯಕ್ಕೆ ಇಬ್ಬರು ಸಾವನಪ್ಪಿದ್ದಾರೆ. ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

03/11/2020 11:04 am

Cinque Terre

55.12 K

Cinque Terre

1

ಸಂಬಂಧಿತ ಸುದ್ದಿ