ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಮಾಡಿದ್ದು, ಮೂವರು ದುಷ್ಕರ್ಮಿಗಳು ಭೀಮಾತೀರದ ಕುಖ್ಯಾತ ಮಹಾದೇವ ಭೈರಗೊಂಡ ಸೇರಿದಂತೆ ಮೂವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವಂತ ಮಹಾದೇವ ಭೈರಗೊಂಡ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಯಲ್ಲಿ ಮಹಾದೇವನ ಸಹಚರ ಬಾಬುರಾಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ವಿಜಯಪುರದ ಅರಕೇರೆ ತಾಂಡ ಬಳಿಯಲ್ಲಿ ಮಹಾದೇವ ಭೈರಗೊಂಡ ಕಾರಿಗೆ ಟಿಪ್ಪರ್ ಒಂದು ಡಿಕ್ಕಿ ಹೊಡಿತ್ತು. ಈ ವೇಳೆ ಕಾರು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಮಹಾದೇವ ಭೈರಗೊಂಡ ಹತ್ಯೆಗೆ ಯತ್ನಿಸಿದ್ದರು. ಮಹಾದೇವನಿಗೆ ಮೂರು ಗುಂಡು ದೇಹಕ್ಕೆ ನಾಟಿದ್ದು, ಆತನ ಅಂಗರಕ್ಷಕ ಕೂಡ ಗಾಯಗೊಂಡಿದ್ದಾನೆ. ಘಟನಾ ಸ್ಥಳಕ್ಕೆ ಚಡಚಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
02/11/2020 05:31 pm