ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿಯನ್ನ ಕೊಲೆಗೈದು ಶವವನ್ನು ಸ್ಕೂಟರ್‌ನಲ್ಲಿ 10 ಕಿ.ಮೀ ಸಾಗಿಸಿದ ಪತಿ

ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದು ಆಕೆಯ ಶವವನ್ನು 10 ಕಿ.ಮೀ ದೂರ ಸಾಗಿಸಿದ ಘಟನೆ ಗುಜರಾತ್‌ನ ಪಾಲಿಟಾನಾ ಪಟ್ಟಣ ಸಮೀಪದ ಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಅಮಿತ್ ಹೆಮ್ನಾನಿ (34) ಕೊಲೆಗೈದ ಆರೋಪಿ. ನೈನಾ ಕೊಲೆಯಾದ ಪತ್ನಿ. ತನಿಖೆಯ ಪ್ರಕಾರ, ಅಮಿತ್‌ ಹಾಗೂ ನೈನಾ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಸಿಂಧಿ ಕ್ಯಾಂಪ್ ಕಾಲೋನಿಯಲ್ಲಿ ವಾಸವಿದ್ದ ದಂಪತಿ ನಡುವೆ ಭಾನುವಾರ ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಈ ವೇಳೆ ಕೋಪಗೊಂಡ ಅಮಿತ್ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಬಳಿಕ ಆರೋಪಿ ಪತ್ನಿಯ ಶವವನ್ನು ಸ್ಕೂಟಿ ಸ್ಟೀರಿಂಗ್ ಮತ್ತು ಫುಟ್‌ರೆಸ್ಟ್ ನಡುವೆ ಇರಿಸಿ ಮನೆಯಿಂದ 10 ಕಿ.ಮೀ ದೂರ ಸಾಗಿದ್ದ. ಇದನ್ನು ಸ್ಥಳೀಯರು ನೋಡುತ್ತಿದ್ದಂತೆ ಪರಾರಿಯಾಗಲು ಪ್ರಯತ್ನಿಸಿದ. ಆದರೆ ಜನರು ತಮ್ಮ ಬೈಕ್‌ನಿಂದ ಆರೋಪಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಅಮಿತ್ ಪತ್ನಿಯ ಶವವನ್ನು ರೋಹಿಶಾಲ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡಲು ಮುಂದಾಗಿದ್ದ ಎಂಬ ಸತ್ಯ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.

Edited By : Vijay Kumar
PublicNext

PublicNext

02/11/2020 04:41 pm

Cinque Terre

41.07 K

Cinque Terre

2

ಸಂಬಂಧಿತ ಸುದ್ದಿ