ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನ್ ಲೈನ್ ರಮ್ಮಿಯಲ್ಲಿ ಸೋಲು : ಕುಣಿಕೆಗೆ ಕೊರಳೊಡ್ಡಿದ ವ್ಯಕ್ತಿ

ಕೊಯಮತ್ತೂರು : ಅಂತರ್ಜಾಲವನ್ನು ಸದ್ಬಳಕೆ ಮಾಡಿಕೊಳ್ಳುವವರಿಗಿಂತ ದುರುಪಯೋಗ ಮಾಡಿಕೊಳ್ಳುವವರೆ ಹೆಚ್ಚು.

28 ವರ್ಷದ ಬ್ಯಾಂಕ್ ಉದ್ಯೋಗಿ ಮದನ್ ಕುಮಾರ್ ಎಂಬುವವರು ಆನ್ ಲೈನ್ ರಮ್ಮಿಯಲ್ಲಿ ಹಣ ಕಳೆದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದರು.

ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಮುಂಜಾನೆ ಕುಟುಂಬದ ಸದಸ್ಯರ ಗಮನಕ್ಕೆ ಬಂದಿದೆ.

ಆನ್ ಲೈನ್ ರಮ್ಮಿಯಲ್ಲಿ ಆರಂಭಿಕ ಹಂತದಲ್ಲಿ ಹಣ ಮಾಡಿದ್ದ ಅವರು, ನಂತರದಲ್ಲಿ ರಮ್ಮಿ ದಾಸರಾಗಿದ್ದರು.

ಬಳಿಕ ಹಣ ಕಳೆದುಕೊಂಡಾಗ ಮದ್ಯಪಾನದ ವ್ಯಸನಕ್ಕೆ ಒಳಗಾಗಿದ್ದರು. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

31/10/2020 04:56 pm

Cinque Terre

48.76 K

Cinque Terre

1