ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣ ವಾಪಸ್ ಕೊಡದ ಗೆಳೆಯನನ್ನ ಊಟಕ್ಕೆ ಕರೆದು ಕೊಲೆಗೈದು ನದಿಗೆಸೆದರು

ಕಲಬುರಗಿ: ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಕೊಲೆಗೈದು ನದಿಗೆ ಎಸೆದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಗೌಸುದ್ದೀನ್ (42) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಫಯಾಜ್, ನಿಜಾಮ್ ಬಾವರ್ಸಿ ಮತ್ತು ವಾಜೀದ್‌ನನ್ನು ಬಂಧಿಸಲಾಗಿದೆ. ಕಲಬುರಗಿ ತಾಲೂಕಿನ ಕುರಿಕೋಟ ಸೇತುವೆ ಬಳಿಯ ಬೆಣ್ಣೆತೋರ ನದಿಯಲ್ಲಿ ಗೌಸುದ್ದೀನ್ ಶವ ಪತ್ತೆಯಾಗಿದೆ.

ಕೊಲೆಯಾದ ಗೌಸುದ್ದೀನ್ ಮತ್ತು ಆರೋಪಿಗಳು ಸೇರಿಕೊಂಡ ಹಳೆ ವಾಹನಗಳನ್ನು ಮಾರಾಟದ ವ್ಯವಹಾರ ಮಾಡುತ್ತಿದ್ದರು. ಫಯಾಜ್ ಹತ್ತಿರ ಗೌಸುದ್ದೀನ್ ೨ ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಈ ಹಣ ನೀಡುವಂತೆ ಫಯಾಜ್ ಕೇಳಿದ್ದ. ಆದರೆ ಗೌಸುದ್ದೀನ್ ಕೊಟ್ಟಿರಲಿಲ್ಲ. ಹೀಗಾಗಿ ಅ.24ರಂದು ಎಲ್ಲರೂ ಒಟ್ಟಿಗೆ ಊಟ ಮಾಡುವ ನೆಪದಲ್ಲಿ ಗೌಸುದ್ದೀನ್ ಅನ್ನು ಕರೆಸಿಕೊಂಡು ಕೊಲೆ ಮಾಡಿದ್ದಾರೆ. ನಂತರ ಬೆಣ್ಣೆತೋರ ನದಿಯಲ್ಲಿ ಮೃತದೇಹವನ್ನು ಎಸದಿದ್ದಾರೆ. ಈ ಸಂಬಂಧ ಕಲಬುರಗಿ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : Vijay Kumar
PublicNext

PublicNext

31/10/2020 03:49 pm

Cinque Terre

38.68 K

Cinque Terre

2

ಸಂಬಂಧಿತ ಸುದ್ದಿ