ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮ ಬೇಕೆಂದು ಅಳುತ್ತಿದ್ದ ಕಂದಮ್ಮನ ಕತ್ತುಹಿಸುಕಿ ಕೊಲೆಗೈದ ಪಾಪಿ ತಂದೆ

ಲಕ್ನೋ: ಪಾಪಿ ತಂದೆಯೊಬ್ಬ ಅಮ್ಮ ಬೇಕೆಂದು ಅಳುತ್ತಿದ್ದ ಮಗಳ ಕತ್ತುಹಿಸುಕಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಸುಲ್ತಾನ್​ಪುರದ ನಿವಾಸಿ ವಾಸುದೇವ್ ತನ್ನ ನಾಲ್ಕು ವರ್ಷದ ಮಗಳನ್ನು ಕೊಲೆಗೈದಿದ್ದಾನೆ. ವಾಸುದೇವ್ ಕೆಲವು ವರ್ಷಗಳಿಂದ ಖೋದಾ ಕಾಲೋನಿಯಲ್ಲಿ ಪತ್ನಿ ಹಾಗೂ ಮಗಳ ಜೊತೆ ವಾಸವಾಗಿದ್ದ. ಆತನ ಪತ್ನಿ ನೋಯ್ಡಾದ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಯಾವುದೋ ವಿಚಾರಕ್ಕೆ 20 ದಿನಗಳ ಹಿಂದೆಯೇ ದಂಪತಿ ಜಗಳವಾಡಿದ್ದರು. ಬಳಿಕ ಆಕೆ ತನ್ನ ಪತಿನನ್ನು ಬಿಟ್ಟು ಹೋಗಿದ್ದಳು.

ತಾಯಿಯಿಂದ ದೂರವಾದ ಮಗು ಅಮ್ಮನಿಗಾಗಿ ಅಳುತ್ತಲೇ ಇತ್ತು. ವಾಸುದೇವ್ ಮಗುವಿನ ಅಳು ನಿಲ್ಲಿಸಲು ತುಂಬಾ ಪ್ರಯತ್ನಿಸಿದ. ಮಗು ಅಳು ನಿಲ್ಲಿಸದಿದ್ದಾಗ ಕೋಪಗೊಂಡ ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಟೋದಲ್ಲಿ ಮಗಳ ಶವವನ್ನು ಇಟ್ಟು, ತನ್ನ ಪತ್ನಿಯನ್ನು ಹುಡುಕುತ್ತಿದ್ದ ವಾಸುದೇವ್​ನನ್ನು ಪೊಲೀಸರು ಬಂಧಿಸಿದ್ದಾರೆ.

Edited By : Vijay Kumar
PublicNext

PublicNext

31/10/2020 02:19 pm

Cinque Terre

39.74 K

Cinque Terre

0