ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾದಕ ಮಾನಿನಿಯರಿಗೆ ಪೋಸ್ಟ್ ಮೂಲಕ ಬೇಕಾದ್ದೆಲ್ಲ ಸಿಗುತ್ತೆ

ಬೆಂಗಳೂರು- ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಪಾಲಾದ "ಮಾದಕ" ನಟಿಯರಾದ ಸಂಜನಾ, ರಾಗಿಣಿ ಪೋಸ್ಟ್ ಮೂಲಕವೇ ಬೇಕಾದ್ದನ್ನೆಲ್ಲ ತರಿಸಿಕೊಳ್ತಿದ್ದಾರಂತೆ.

ಸದ್ಯ ಈ ಇಬ್ಬರೂ ನಟಿಮಣಿಯರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅಲ್ಲಿ ತಮಗೆ ಅವಶ್ಯಕವಾದ ವಸ್ತುಗಳನ್ನು ಪೋಸ್ಟ್ ಮೂಲಕ ತರಿಸಿಕೊಳ್ತಿದ್ದಾರೆ‌. ಅವರ ಪೋಷಕರು ಮನೆಯಿಂದಲೇ ಇವರು ಕೇಳಿದ್ದನ್ನು ಪೋಸ್ಟ್ ಮೂಲಕ ಕಳಿಸುತ್ತಿದ್ದಾರೆ.‌

ಈ ಮೂಲಕ ಜೈಲಿಗೆ ಬಂದ ಪಾರ್ಸಲ್ ಗಳನ್ನು ಜೈಲು ಅಧಿಕಾರಿಗಳು ಪರಿಶೀಲಿಸುತ್ತಾರೆ‌. ನಂತರವಷ್ಟೇ ಆ ಪಾರ್ಸಲ್ ಗಳು ಮಾದಕ ನಟಿಯರ ಕೈ ಸೇರುತ್ತವೆ. ಅದರಲ್ಲಿ ದಿನಬಳಕೆಯ ಬಟ್ಟೆ, ಸಾಬೂನು, ಮಾರ್ಜಕಗಳು ಬಂದಿವೆ.

Edited By : Nagaraj Tulugeri
PublicNext

PublicNext

31/10/2020 01:40 pm

Cinque Terre

40.89 K

Cinque Terre

2

ಸಂಬಂಧಿತ ಸುದ್ದಿ