ಬೆಂಗಳೂರು- ಒಟ್ಟು 77 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಬೈಕ್ ಮಾಲೀಕನಿಗೆ ಬರೋಬ್ಬರಿ ₹42,500 ದಂಡ ಹಾಕಲಾಗಿದೆ.
ಮಡಿವಾಳ ಠಾಣೆ ಸಂಚಾರಿ ಪೊಲೀಸರ ಕಾರ್ಯಾಚರಣೆ ವೇಳೆ ಬೈಕ್ ಸವಾರ ಅರುಣ್ ಕುಮಾರ್ ಇಂದು ಇನ್ಸ್ಪೆಕ್ಟರ್ ನವೀನ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಕೈಗೆ ಸಿಕ್ಕಿದ್ದಾರೆ. ಈ ಹಿಂದೆ ಅನೇಕ ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಅರುಣ್ ಕುಮಾರ್ ಗೆ ಒಂದೇ ಬಾರಿ ಬರೋಬ್ಬರಿ ₹42,500 ರೂ ದಂಡ ಹಾಕಿ ನೋಟೀಸ್ ನೀಡಿದ್ದಾರೆ. ಹಾಗೂ ಬೈಕ್ ವಶಕ್ಕೆ ಪಡೆದಿದ್ದಾರೆ.
PublicNext
30/10/2020 03:22 pm