ಮೈಸೂರು-ಸಂಸ್ಕೃತ ಪಾಠಶಾಲೆ ಕಾರ್ಯದರ್ಶಿ ಕೊಲೆ ಪ್ರಕರಣದ ಆರೋಪಿ ವಿಶ್ವನಾಥ್ ಭಟ್(52) ಎಂಬುವವರನ್ನ ಬಂಧಿಸಲಾಗಿದೆ. ಆದ್ರೆ ಈ ಬಗ್ಗೆ ಆರೋಪಿಯ ಮಗಳು ಗಾಯಕಿ ಅನನ್ಯಾ ಭಟ್ ಹೇಳಿದ್ದೇ ಬೇರೆ.
ನಾನು ಹಾಗೂ ನನ್ನ ತಾಯಿ 2 ವರ್ಷಗಳ ಹಿಂದೆಯೇ ನನ್ನ ತಂದೆಯಿಂದ ದೂರವಾಗಿದ್ದೇವೆ ಎಂದಿದ್ದಾರೆ. ಅವರಿ ನಮ್ಮಿಂದ ಪ್ರತ್ಯೇಕವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ
ಕೊಲೆಯಾದ ಪರಶಿವಮೂರ್ತಿ ಆರೋಪಿ ವಿಶ್ವನಾಥ್ ಭಟ್ ಗೆ ಪ್ರತಿ ತಿಂಗಳು ಕಮಿಷನ್ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಹೀಗಾಗಿ ಮನನೊಂದ ವಿಶ್ವನಾಥ್ ಭಟ್ ಪರಶಿವಮೂರ್ತಿ ಅವರನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದರು ಎನ್ನಲಾಗಿದೆ.
PublicNext
28/10/2020 02:22 pm