ಬೆಂಗಳೂರು- ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 13.50 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಹೊಯ್ಸಳಗೌಡ (48) ಹಾಗೂ ವೈಯಾಲಿಕಾವಲ್‌ನ ನರಸಿಂಹಮೂರ್ತಿ (38) ಎಂಬುವವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬಂಧಿತೆರೆಲ್ಲ ಸಹಕಾರ ನಗರದ ನಿವಾಸಿಗಳು.
ಈ ಕುರಿತು ಮಾಹಿತಿ ನೀಡಿರುವ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ವೇಲೆ ಸೋಲು- ಗೆಲುವು ಲೆಕ್ಕಾಚಾರದಲ್ಲಿ ಆರೋಪಿಗಳು ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಇನ್ನು ಗೆದ್ದವರಿಗೆ ತಾವೇ ಹೋಗಿ ಹಣ ನೀಡುತ್ತಿದ್ದು, ಸೋತವರಿಂದ ಹಣ ವಸೂಲಿ ಮಾಡಲು ತಾವೇ ಹೋಗುತ್ತಿದ್ದರು. ಮಲ್ಲೇಶ್ವರ ಬಳಿ ಆರೋಪಿಗಳು ಹಣ ಕಟ್ಟಿಸಿಕೊಳ್ಳಲು ಬಂದಿದ್ದಾಗ ದಾಳಿ ಮಾಡಿ ಬಂಧಿಸಲಾಗಿದೆ.
PublicNext
27/10/2020 03:30 pm