ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯರು ಇವರು ವೃಷಣ ಕಟ್ ಮಾಡಿ ತಿನ್ನುವರು

ಒಕ್ಲಹೋಮ(ಅಮೆರಿಕ)- ಈ ಸುದ್ದಿ ಓದಿದ ಮೇಲೆ ನಿಮಗೆಲ್ಲ ಇನ್ನೂ ಈ ಜಗತ್ತಲ್ಲಿ ಎಂತೆಂಥಾ ವಿಚಿತ್ರ ಜನ ಇದಾರಪ್ಪ ಎಂದು ಅನ್ನಿಸದೇ ಇರಲು ಸಾಧ್ಯವಿಲ್ಲ.

ಮನುಷ್ಯರು ಇಲಿಮರಿಗಳನ್ನು ಜೀವಂತವಾಗಿ ತಿನ್ನುವ ಸಂಗತಿ ನೋಡಿದ್ದೇವೆ. ಕೇಳಿದ್ದೇವೆ. ಆದ್ರೆ ಅಮೆರಿಕ ಮೂಲದ ಇವರು ಮನುಷ್ಯರ ವೃಷಣವನ್ನೇ ಚಿಕನ್ ತಿಂದಂತೆ ತಿಂದುಬಿಟ್ಟಿದ್ದಾರೆ. ಹೀಗೆ ವೃಷಣವನ್ನೇ ತಿಂದ ಇವರು ವೈದ್ಯರು!

ಯೆಸ್... ನಂಬಲಸಾಧ್ಯ ಇರಬಹುದು. ಆದ್ರೆ ಇದು ಸತ್ಯ. ಅಮೆರಿಕದ ಓಕ್ಲಹೋಮ ಪ್ರದೇಶದ ಈ ಇಬ್ಬರು ವೈದ್ಯರು ತಾವು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು, ನಮಗೆ ಇದರಲ್ಲಿ 15 ವರ್ಷಗಳ ಅನುಭವ ಇದೆ ಎಂದು ಹೇಳಿಕೊಂಡು ಜನರನ್ನು ನಂಬಿಸಿದ್ದಾರೆ.‌

ಇತ್ತೀಚೆಗೆ ರಕ್ತಸ್ರಾವವಾದ ಕಾರಣ ಯುವಕನೊಬ್ಬ ಈ ಪ್ರಳಯಾಂತಕ ವೈದ್ಯರ ಬಳಿ ಬಂದಿದ್ದಾನೆ. ಆತನಿಗೆ ನೋವು ನಿವಾರಕ ಇಂಜೆಕ್ಷನ್‌ ಕೊಟ್ಟ ಈ ವೈದ್ಯರು ವೃಷಣ ಚೀಲವನ್ನು ಬ್ಲೇಡ್ ನಿಂದ ಹರಿದು ಬೀಜಗಳನ್ನು ಹೊರತೆಗೆದು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ನಂತರ ಆ ಯುವಕನನ್ನು ಮನೆಗೆ ಕಳುಹಿಸಿದ್ದಾರೆ‌. ಸ್ವಲ್ಪ ಸಮಯದ ನಂತರ ಸಹಿಸಲಸಾಧ್ಯ ನೋವಿನಿಂದ ಬಳಲಿದ ಆ ಯುವಕ ಬೇರೆ ವೈದ್ಯರ ಬಳಿ ತೋರಿಸಿದಾಗ ಈ ವಿಷಯ ಗೊತ್ತಾಗಿದೆ‌.

ಪೊಲೀಸರಿಗೆ ವಿಷಯ ತಿಳಿದು ಇಬ್ಬರೂ ವೈದ್ಯರ ಕ್ಲಿನಿಕ್ ಪರಿಶೀಲಿಸಿದಾಗ ಫ್ರೀಜರ್ ನಲ್ಲಿ ಕತ್ತರಿಸಿಟ್ಟ ವೃಷಣ ಬೀಜಗಳು ಪತ್ತೆಯಾಗಿವೆ. ಇವರಿಬ್ಬರನ್ನೂ ಬಂಧಿಸಿದ ಪೊಲೀಸರು ಇದಕ್ಕೂ ಮುನ್ನ ಅವರ ಬಳಿ ಚಿಕಿತ್ಸೆ ಮಾಡಿಸಿಕೊಂಡವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Edited By : Nagaraj Tulugeri
PublicNext

PublicNext

27/10/2020 01:21 pm

Cinque Terre

80.28 K

Cinque Terre

6

ಸಂಬಂಧಿತ ಸುದ್ದಿ