ಕಡೂರು-ಹೆತ್ತ ತಾಯಿಯೇ ತನ್ನ ಮಗುವನ್ನು ನೀರೊಲೆಯಲ್ಲಿ ಹಾಕಿ ಸುಟ್ಟ ಘಟನೆ ಕಡೂರು ತಾಲೂಕಿನ ದೊಡ್ಡಹಟ್ಟಿ ಗ್ರಾಮದಲ್ಲಿ ನಡೆದಿದೆ. ಕೇವಲ 23 ದಿನದ ಹಸುಗೂಸು ಇದಾಗಿದ್ದು ಮಗುವಿನ ದೇಹ ಸುಟ್ಟ ವಾಸನೆ ನೆರೆಹೊರೆಯವರಿಗೆ ತಿಳಿದಾಗ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಸುಟ್ಟು ಕೊಂದ ಆ ಮಹಾತಾಯಿ ಅದೇ ಗ್ರಾಮದ ಸಂಗೀತಾ ಎಂಬಾಕೆ.
26 ವರ್ಷ ವಯಸ್ಸಿನ ಸಂಗೀತಾ 2 ವರ್ಷಗಳ ಹಿಂದೆ ಉತ್ತರ ಪ್ರದೇಶ ಮೂಲದ ಅಮಿತ್ ಎಂಬ ಯುವಕನನ್ನು ಪ್ರೇಮಿಸಿ ಮದುವೆಯಾಗಿದ್ದಳು. ಇದೇ ತಿಂಗಳಿಲ್ಲಿ ಆಕೆಗೆ ಹೆರಿಗೆಯಾಗಿತ್ತು. ಹೆಣ್ಣು ಮಗು ಹುಟ್ಟಿದ್ದು ಇಷ್ಟವಿರಲಿಲ್ಲ. ಹೀಗಾಗಿ ಈ ಪಾಪಿ ತಾಯಿ ಹಸುಗೂಸನ್ನು ಸುಟ್ಟು ಕೊಂದಿದ್ದಾಳೆ ಎಂಬುದು ಸದ್ಯದ ತನಿಖೆಯಿಂದ ತಿಳಿದು ಬಂದಿದೆ.
ಕಡೂರು ಪೊಲೀಸರು ಈಗ ಸಂಗೀತಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದಕ್ಕೂ ಮುನ್ನ ಆಕೆ ಪೊಲೀಸರ ಮುಂದೆ ತನ್ನ ತಪ್ಪೊಪ್ಪಿಕೊಂಡಿದ್ದಾಳೆ.
PublicNext
27/10/2020 11:28 am