ಬೆಂಗಳೂರು: ಜಿಲ್ಲೆ, ರಾಜ್ಯ, ದೇಶದಲ್ಲಿ ಕ್ರೈಂ ಗಳು ಎಗ್ಗಿಲ್ಲದೆ ನಡೆಯುತ್ತಿರೋದಕ್ಕೆ ಕಾನೂನು ವ್ಯವಸ್ಥೆ ತನ್ನ ಹಿಡಿತವನ್ನು ಕಳೆದುಕೊಂಡಿರುವುದೇ ಮುಖ್ಯ ಕಾರಣ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿದೆ.
ನಿತ್ಯ ಬೆಳಗಾದ್ರೆ ಸಾಕು ಒಂದಿಲ್ಲೊಂದು ಕ್ರೈಂ ಸುದ್ದಿಗಳು ನಮ್ಮಲ್ಲಿ ನಡುಕ ಹುಟ್ಟಿಸುತ್ತಲೆ ಇರುತ್ತವೆ.
ಅದರಲ್ಲೂ ಈ ಸರಗಳ್ಳರ ಹಾವಳಿಯಿಂದ ಜನ ಬೇಸತ್ತು ಹೋಗಿದ್ದಾರೆ.
ಇಲ್ಲೋಬ್ಬ ಕಳ್ಳ ವೃದ್ಧೆಯೊಬ್ಬರ ಸರ ಕಳವು ಮಾಡಿ ಎಸ್ಕೇಪ್ ಆಗಿರುವ ಘಟನೆ ಕೆಂಗೇರಿ ಬಳಿಯ ವಲಗೇರಹಳ್ಳಿ ಮುಖ್ಯರಸ್ತೆಯಲ್ಲಿನಡೆದಿದೆ.
ಆಯುಧಪೂಜೆ ಹಿನ್ನೆಲೆಯಲ್ಲಿ ವೃದ್ಧೆ ಸರೋಜಮ್ಮ ಪೂಜಾ ಸಾಮಗ್ರಿ ತರಲು ತೆರಳುತ್ತಿದ್ದರು.
ಈ ವೇಳೆ ಹಿಂಬಂದಿಯಿಂದ ಬೈಕ್ ನಲ್ಲಿ ಬಂದ ವ್ಯಕ್ತಿ ಕ್ಷಣಾರ್ಧದಲ್ಲಿ ಕುತ್ತಿಗೆಯಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾನೆ.
ಆರೋಪಿ ಚಿನ್ನದ ಸರ ಎಳೆದ ರಭಸಕ್ಕೆ ಕಳೆಗೆ ಬಿದ್ದ ವೃದ್ಧೆ ಗಾಯಗಳಾಗಿವೆ. ಸದ್ಯ ವೃದ್ಧೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
27/10/2020 11:23 am