ಅಶ್ಲೀಲ ವೆಬ್ ತಾಣದಲ್ಲಿ ತಮ್ಮ ವಿಡಿಯೋ ಅಪ್ಲೋಡ್ ಆಗಿದ್ದರ ಬಗ್ಗೆ ನಟಿ ಸೋನಾ ಎಂ ಅಬ್ರಾಹಂ ಅಸಮಾಧಾನಗೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಈ ಬಗ್ಗೆ ನೋವು ತೋಡಿಕೊಂಡಿರುವ ಅವರು ನಾನು 14ನೇ ವಯಸ್ಸಿನಲ್ಲಿದ್ದಾಗ ನಟಿಸಿದ ಫಾರ್ ಸೇಲ್ ಎಂಬ ಚಿತ್ರದಲ್ಲಿ ಅತ್ಯಾಚಾರದ ದೃಶ್ಯವೊಂದಿತ್ತು. ತಂಗಿಯ ಮೇಲೆ ಅತ್ಯಾಚಾರ ನಡೆದಿದ್ದಕ್ಕೆ ಮನನೊಂದು ಅಕ್ಕ ಆತ್ಮಹತ್ಯೆ ಮಾಡಿಕೊಳ್ಳುವುದು ಆ ಚಿತ್ರದ ಕಥೆಯ ತಿರುಳಾಗಿತ್ತು. ತಂಗಿಯ ಮೇಲೆ ದೌರ್ಜನ್ಯ ನಡೆಯುವ ಆ ದೃಶ್ಯದಲ್ಲಿ ನನ್ನ ಪಾಲಕರ ಸಮ್ಮುಖದಲ್ಲೇ ನಟಿಸಿದ್ದೇನೆ. ಆದ್ರೆ ನಾನು ಎಸ್ಸೆಸ್ಸೆಲ್ಸಿ ಮುಗಿಸಿ ಪಿಯು ಹಂತಕ್ಕೆ ಬರುವಾಗ ಅದರ ವಿಡಿಯೋ ಅಶ್ಲೀಲ ವೆಬ್ ತಾಣಗಳಲ್ಲಿ ಅಪ್ಲೋಡ್ ಆಗಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದೇನೆ. ನನ್ನ ಸ್ನೇಹಿತರು ಹಾಗೂ ನನ್ನ ಶಿಕ್ಷಕ ವರ್ಗದವರು ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ ಎಂದು ನಟಿ ಸೋನಾ ಎಂ ಅಬ್ರಾಹಂ ತಮ್ಮ ಫೇಸ್ ಬುಕ್ ವಿಡಿಯೋದಲ್ಲಿ ಹೇಳಿದ್ದಾರೆ.
PublicNext
25/10/2020 08:05 am