ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಕೆ ರಕ್ಷಣೆ ಡ್ರಾಮಾ ಮಾಡಿದ್ದ ಪಿಎಸ್ಐ ಸಸ್ಪೆಂಡ್

ಕಲಬುರಗಿ- ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ್ ಮೇಕೆ ರಕ್ಷಣೆ ಮಾಡಿದೆನೆಂಬ ಡ್ರಾಮಾ ಮಾಡಿದ್ದ ಸಬ್ ಇನ್ಸ್ಪೆಕ್ಟರ್ ಮಲ್ಲಣ್ಣ ಯಲಗೊಂಡ ಅವರನ್ನು ಅಮಾನತ್ತು ಮಾಡಲಾಗಿದೆ. ಕಲಬುರಗಿ ಎಸ್ಪಿ ಸಿಮಿ ಮಾರಿಯಾ ಜಾರ್ಜ್ ಅವರು ಈ ಅಮಾನತು ಆದೇಶ ನೀಡಿದ್ದಾರೆ.

ಕಬಲುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್ಐ ಆಗಿದ್ದ ಮಲ್ಲಣ್ಣ ಯಲಗೊಂಡ ಅವರು ಮೇಕೆ ಮರಿಗಳನ್ನು ತಾವೇ ಸ್ವತಃ ಬೇರೆಡೆಯಿಂದ ತರಿಸಿದ್ದರು ಎನ್ನಲಾಗಿದೆ. ನಂತರ ಅವುಗಳನ್ನು ಭೀಮಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೊಂಡೊಯ್ದು ತಾವೇ ರಕ್ಷಣೆ ಮಾಡಿದ್ದಾರೆಂಬಂತೆ ನಕಲಿ ಕಾರ್ಯಾಚರಣೆ ಮಾಡಿದ್ದರು. ಜೊತೆಗೆ ಗ್ರಾಮಸ್ಥರಿಂದ ಅದರ ವಿಡಿಯೋ ಕೂಡ ಮಾಡಿಸಿ ಅದನ್ನು ವೈರಲ್ ಮಾಡಿಸಿದ್ದರು. ಈ ಆರೋಪದ ಹಿನ್ನಲೆಯಲ್ಲಿ ಪಿಎಸ್ಐ ಮಲ್ಲಣ್ಣ ಯಲಗೊಂಡ ಅವರನ್ನು ಅಮಾನತು ಮಾಡಲಾಗಿದೆ.

ಇದಕ್ಕೂ ಮುನ್ನ ಕಳೆದ ಜೂನ್ ತಿಂಗಳಲ್ಲಿ ಕೊರೋನಾ ಭೀತಿಯ ನಡುವೆಯೂ ಪಿಎಸ್ಐ ಮಲ್ಲಣ್ಣ್ ಅವರು ಸಾಮಾಜಿಕ ಅಂತರ ಮರೆತು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಆಗ ಅಭಿಮಾನಿಗಳು ಇವರಿಗೆ ಹಾಲಿನ ಅಭಿಷೇಕ ಮಾಡಿದ್ದರು.

Edited By : Nagaraj Tulugeri
PublicNext

PublicNext

23/10/2020 11:35 am

Cinque Terre

59.09 K

Cinque Terre

12

ಸಂಬಂಧಿತ ಸುದ್ದಿ