ಕೃಷ್ಣಗಿರಿ, ತಮಿಳುನಾಡು : ಇತ್ತಿಚ್ಚೆಗೆ ಎಲ್ಲೇಡೆ ಭಾರಿ ಕಳ್ಳತನಗಳು ನಡೆಯುತ್ತಿವೆ.
ಇದು ಪೊಲೀಸ್ ಇಲಾಖೆಯ ವೈಪಲ್ಯವೊ ಅಥವಾ ಖತರ್ನಾಕ್ ಕಳ್ಳರ ತಂಡದ ಚಾಣಾಕ್ಷತನವೊ ತಿಳಿಯುತ್ತಿಲ್ಲ.
ಹೈವೇಯಲ್ಲಿ ಸಾಗುತ್ತಿದ್ದ ಕಂಟೇನರ್ ಟ್ರಕ್ ಒಂದನ್ನು ಹೈಜಾಕ್ ಮಾಡಿ ಕಳ್ಳರ ತಂಡ ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ 14,500 ಮೊಬೈಲ್ ಫೋನ್ ಗಳನ್ನ ಲೂಟಿ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಚೆನ್ನೈನಿಂದ ಮುಂಬೈಗೆ ಕಡೆಗೆ ಸಾಗುತ್ತಿದ್ದ ಕಂಟೇನರ್ ಟ್ರಕ್ ವೊಂದು ಮೊಬೈಲ್ ಫೋನ್ ಗಳನ್ನು ಹೊತ್ತು ಸಾಗುತ್ತಿತ್ತು.
ಸೂಲಗಿರಿ ಮತ್ತು ಕೃಷ್ಣಗಿರಿ ನಡುವೆ ಮೇಲು ಮಲೈ ಎಂಬಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಪರಿಚಿತ ಕಾರ್ ಒಂದು ಲಾರಿಯನ್ನು ಓವರ್ ಟೇಕ್ ಮಾಡಿದೆ.
ನಂತರ ಟ್ರಕ್ ಅಡ್ಡಗಟ್ಟಿದ ಗ್ಯಾಂಗ್ ಟ್ರಕ್ ಡ್ರೈವರ್ ಮತ್ತು ಕ್ಲೀನರ್ ಇಬ್ಬರನ್ನೂ ಹಗ್ಗದಿಂದ ಕಟ್ಟಿ ಹಾಕಿದ್ದಲ್ಲದೇ ಅವರನ್ನು ಸ್ವಲ್ಪ ದೂರ ಕಾರಿನಲ್ಲಿ ಕರೆದೊಯ್ದು ರಸ್ತೆ ಬದಿಯಲ್ಲಿ ಬಿಟ್ಟಿದ್ದಾರೆ.
ಇನ್ನು ಮೊಬೈಲ್ ಫೋನ್ ಗಳು ತುಂಬಿದ್ದ ಲಾರಿಯನ್ನು 15 ಕಿ.ಮೀ ಚಲಾಯಿಸಿಕೊಂಡು ಹೋಗಿರುವ ಖದೀಮರು ಅಲ್ಲಿ ಬೇರೆ ಟ್ರಕ್ ಗೆ ಎಲ್ಲಾ ಮೊಬೈಲ್ ಫೋನ್ ಗಳನ್ನು ಶಿಫ್ಟ್ ಮಾಡಿದ್ದಾರೆ.
ಚೆನ್ನೈನ ಪೂನಮಲೈ ಬಳಿ ಇರುವ ರೆಡ್ ಮಿ ಮೂಬೈಲ್ ತಯಾರಿಕ ಘಟಕದಲ್ಲಿ ಈ ಮೊಬೈಲ್ ಗಳನ್ನ ತಯಾರಿಸಲಾಗಿತ್ತು.
ಟ್ರಕ್ ನಲ್ಲಿ ಒಟ್ಟು 14,500 ರೆಡ್ಮಿ ಸ್ಮಾರ್ಟ್ ಫೋನ್ ಳಿದ್ದವು.
ಮೊಬೈಲ್ ಸಾಗಾಟದ ಬಗ್ಗೆ ಮೊದಲೇ ತಿಳಿದಿದ್ದ ಲೂಟಿಕೋರರು ಮಧ್ಯರಾತ್ರಿ ಲಾರಿಯನ್ನು ಹೈಜಾಕ್ ಮಾಡಿ ಫೋನ್ ಗಳನ್ನ ದೋಚಿ ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಸೂಲಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲೂಟಿ ಗ್ಯಾಂಗ್ ಪತ್ತೆ ಹಚ್ಚಲು 17 ತಂಡ ರಚಿಸಲಾಗಿದೆ. ಎಂದು ಸೇಲಂ ವಿಭಾಗದ ಡಿಜಿಪಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
PublicNext
22/10/2020 07:46 am