ಬೆಂಗಳೂರು: ವಿದೇಶಿ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಮಗ್ಲರ್ಗಳಿಂದ ಜಪ್ತಿ ಮಾಡಲಾಗಿದ್ದ 1 ಕೋಟಿ ರೂ.ಗೂ ಅಧಿಕ ಮೌಲ್ಯದ 2.6 ಕೆಜಿ ಚಿನ್ನ ನಾಪತ್ತೆಯಾದ ಘಟನೆ ಕೆಂಪೇಗೌಡ ಅತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸ್ಮಗ್ಲರ್ಸ್ಗಳಿಂದ 2.6 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದರು. ಬಳಿಕ ಜಪ್ತಿ ಮಾಡಲಾಗಿದ್ದ ಚಿನ್ನವನ್ನು ಏರ್ಪೋರ್ಟ್ನ ಎಂಎಚ್ಬಿ ಗೋದಾಮಿನಲ್ಲಿಡಲಾಗಿತ್ತು. ಆದರೆ, ಆ ಚಿನ್ನ ಕಾಣೆಯಾಗಿರುವ ವಿಚಾರ ಇತ್ತೀಚೆಗಿನ ಆಂತರಿಕ ಪರಿಶೀಲನೆ ವೇಳೆ ಬಹಿರಂಗವಾಗಿದೆ.
ಗೋದಾಮಿನಲ್ಲಿದ್ದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಲಾಗಿದೆ. 13 ಪ್ರಕರಣಗಳಲ್ಲಿ ಚಿನ್ನ ಕಳ್ಳಸಾಗಣೆದಾರರಿಂದ 2.5 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದು ಲೆಕ್ಕಪರಿಶೋಧನೆ ವೇಳೆ ಈ ಚಿನ್ನ ಲೆಕ್ಕಕ್ಕೆ ಸಿಕ್ಕಿಲ್ಲ.
ಏರ್ ಪೋರ್ಟ್ ಕಸ್ಟಮ್ಸ್ ವಿಭಾಗದ ಜಂಟಿ ಆಯುಕ್ತ ಎಂ.ಜೆ. ಚೇತನ್ ಈ ಕುರಿತು ದೂರು ನೀಡಿದ್ದು ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
PublicNext
18/10/2020 08:03 am