ಬೆಂಗಳೂರು: ನನ್ನ ಹೆಂಡ್ತಿಗೆ ಯಾಕ್ ಫೋನ್ ಮಾಡುತ್ತೀಯಾ ಎಂದು ಪ್ರಶ್ನಿಸಿದ ಗೆಳೆಯನನ್ನೇ ಕೊಲೆಗೈದು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ಅಲಿಯಾಸ್ ಚೋಟಾ ಲಾಲ್ ಸ್ನೇಹಿತನನ್ನೇ ಕೊಲೆಗೈದ ಆರೋಪಿ. ಅಂದ್ರಹಳ್ಳಿಯ ಪ್ರಸನ್ನ ಬಡಾವಣೆಯ ನಿವಾಸಿ ಮೃತ ಕೇದಾರ್ ಸಹಾನಿ ಹಾಗೂ ರಾಹುಲ್ ಪೈಂಟಿಗ್ ಕೆಲಸ ಮಾಡುತ್ತಿದ್ದರು. ಆದರೆ ಕೇದಾರ್ ಪತ್ನಿ ಕುಸುಮಾ ಮೊಬೈಲ್ಗೆ ರಾಹುಲ್ ಆಗಾಗ ಕರೆ ಮಾಡುತ್ತಿದ್ದ. ಈ ವಿಚಾರ ತಿಳಿಸಿದ ರಾಹುಲ್, ನನ್ನ ಪತ್ನಿಗೆ ಯಾಕೆ ಕರೆ ಮಾಡ್ತೀಯಾ ಎಂದು ಜಗಳವಾಡಿದ್ದ.
ನಿನ್ನ ಜೊತೆ ಮಾತನಾಡಬೇಕು ಬಾ ಎಂದು ರಾಹುಲ್ ಕೇದಾರ್‌ನನ್ನು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಎನ್‌ಕ್ಲೇವ್ ಅಪಾರ್ಟ್ಮೆಂಟ್ಗೆ ಸೆಪ್ಟೆಂಬರ್ 5ರಂದು ರಾತ್ರಿ ಕರೆಸಿಕೊಂಡಿದ್ದ. ಈ ವೇಳೆ ಕೇದಾರ್‌ಗೆ ಮದ್ಯ ಕುಡಿಸಿ ಸಿಲಿಂಡರ್ನಿಂದ ತಲೆ ಜಜ್ಜಿ ಕೊಲೆಗೈದು ಮೃತದೇಹವನ್ನು ಮೂಟೆ ಕಟ್ಟಿ ಅಪಾರ್ಟ್ಮೆಂಟ್್ನಿಂದ ಎಸೆದು ಪರಾರಿಯಾಗಿದ್ದ. ಬಿಹಾರದಲ್ಲಿ ತಲೆ ಮರೆಸಿಕೊಂಡಿದ್ದ ರಾಹುಲ್‌ನನ್ನು ಬ್ಯಾಡರಹಳ್ಳಿ ಇನ್‍ಸ್ಪೆಕ್ಟರ್ ರಾಜೀವ್ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿದೆ.
PublicNext
17/10/2020 11:23 am