ಲಕ್ನೋ: ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೆಲ ದುಷ್ಕರ್ಮಿಗಳು ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಅಮಾನವೀಯ ಘಟನೆ ಬಾರಾಬಂಕಿ ಸಾತ್ರಿಖ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೃಷಿ ಭೂಮಿಯಲ್ಲಿ 18 ವರ್ಷದ ದಲಿತ ಯುವತಿಯ ಶವಪತ್ತೆಯಾಗಿದ್ದು, ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಮರಣೋತ್ತರ ವರದಿ ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಸ್.ಗೌತಮ್ ಅವರು, ಕೃತ್ಯದ ಸಂಬಂಧ ಕೆಲವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ. ಮೃತ ಯುವತಿಯ ತಂದೆ ದೂರು ನೀಡಿದ್ದು, ಜಮೀನಿಗೆ ಹೋಗಿದ್ದ ಮಹಿಳೆ ಮರಳಿ ಬರಲಿಲ್ಲ. ಬಳಿಕ ಅವಳ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮಕ್ಕೆ ಪೊಲೀಸರ ತಂಡ ತೆರಳಿ, ಸ್ಥಳ ಪರಿಶೀಲನೆ ನಡೆದೆ.
PublicNext
16/10/2020 03:36 pm