ಬೆಂಗಳೂರು: ಆರ್ಎಚ್ಪಿ ರಸ್ತೆಯಲ್ಲಿರುವ ಡುಯೆಟ್ ಲೇಡಿಸ್ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ನಿನ್ನೆ ಸಂಜೆ ಸುಮಾರು 9ಗಂಟೆಯಷ್ಟೊತ್ತಿಗೆ ಬಾರ್ ಮುಂಭಾಗ ಬೈಕ್ನಲ್ಲಿ ಬಂದ ಇಬ್ಬರು ಶೂಟ್ ಮಾಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮನಿಶ್ ಶೆಟ್ಟಿ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರಿನ ಕೊಪ್ಪ ಮೂಲದ ಸಾವನ್ನಪ್ಪಿದ ಮನಿಶ್ ಶೆಟ್ಟಿ ಭೂಗತ ಪಾತಕಿ ಬನ್ನಂಜೆ ರಾಜನ ಆಪ್ತನಾಗಿದ್ದ, ಮಂಗಳೂರು, ಬಾಂಬೆಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳು ಇವೆ. ಅಂಡರ್ವರ್ಲ್ಡ್ ಡಾನ್ಗಳಾಗಿದ್ದ ಬನ್ನಂಜೆ ರಾಜ, ರವಿ ಪೂಜಾರಿ ಅವರ ಆಪ್ತನಾಗಿಯೂ ಗುರುತಿಸಿಕೊಂಡಿದ್ದ. ಈತನ ವಿರುದ್ಧ ಮೂರು ರಾಜ್ಯಗಳಲ್ಲಿ ಪ್ರಕರಣಗಳಿವೆ.. 2007ರ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚೆಮ್ಮನೂರು ಜ್ಯೂವೆಲ್ಲರ್ಸ್ ರಾಬರಿ ಕೇಸ್ನ ಪ್ರಮುಖ ಆರೋಪಿಯಾಗಿದ್ದ. 8 ಜನ ಸಹಚರರಿಂದ ರಾಬರಿ ಮಾಡಿಸಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್ ಸೇರಿದಂತೆ ಅನೇಕ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸಿದ್ಧಾರೆ. ದುಷ್ಕರ್ಮಿಗಳು ರಿವಾಲ್ವರ್ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
PublicNext
16/10/2020 08:02 am